ಮಂಡ್ಯ : ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಸಮರ ಜೋರಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಗುದ್ದಾಟ ಹೈಕಮಾಂಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕವಾದ ವಿಷಯದ ಬಗ್ಗೆ ನಾನು ಹೇಳುವುದಕ್ಕೆ ಇಷ್ಟಪಡಲ್ಲ. ಉಚಿತ, ಉಚಿತ ಅಂತ ಹೇಳಿ ಒಂದೇ ಸಲ ಬೆಲೆ ಏರಿಕೆ ಮಾಡಿದ್ರು. ಡಿಸೆಂಬರ್ಗೆ ವಿದ್ಯುತ್ ದರ ಏರಿಕೆ ಮಾಡ್ತಾರೆ. ಒಂದೊಂದು ನೊಡ್ಕೊಂಡು ಹೊಗ್ತಿದ್ರೆ ಅಭಿವೃದ್ಧಿ ಬಗ್ಗೆ ಗಮನಕೊಡ್ತಿಲ್ಲ ಅನ್ನೋದು ಜನಕ್ಕೆ ಸ್ಪಷ್ಟವಾಗಿ ಗೊತ್ತಾಗ್ತಿದೆ. ಸಿಎಂ ಗುದ್ದಾಟ ಅವರ ಪಕ್ಷದ ವಿಚಾರ. ಒಳಗೆ ಏನು ಗುದ್ದಾಟ ಆಗ್ತಿದೆ ನಮಗೆ ಮಾಹಿತಿ ಇಲ್ಲ ಎಂದರು.
ಇನ್ನೂ ಮುಂದಿನ ದಿನಗಳಲ್ಲಿ ಪಕ್ಷ ನನಗೆ ಸೂಕ್ತ ಸ್ಥಾನ, ಸೇವೆಗೆ ಅವಕಾಶ ಕೊಡ್ತಾರೆ ಅಂತ ಲಾಭಿ ಮಾಡಲ್ಲ. ನಾನು ಎಲ್ಲೋ ಹೋಗಿ ಕೊಡಿ ಅನ್ನೋ ಅಭ್ಯಾಸ ಇಲ್ಲ. ಬಿಜೆಪಿ ನನ್ನನ್ನು ನೆಗ್ಲೆಕ್ಟ್ ಮಾಡ್ತಿಲ್ಲ. ಕೆಲವರು ಲಾಭಿ ಮಾಡ್ತಾರೆ, ನನಗೆ ಆ ರೀತಿ ಮಾಡಲ್ಲ. ನಮಗೂ ಸಮಯ ಬರುತ್ತೆ, ಅವಾಗ ತಪ್ಪಿಸಲು ಯಾರ ಕೈನಲ್ಲೂ ಸಾಧ್ಯವಿಲ್ಲ ಎಂದರು.



