ಮಂಡ್ಯ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರವಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದ್ದಾರೆ.
ಬೊಮ್ಮಾಯಿ ಸಿಎಂ ಆದಾಗ ಕೇಂದ್ರ ಸರ್ಕಾರ ಅನುದಾನ ಘೋಷಣೆ ಮಾಡಿದ್ದರು. ಇದುವರೆಗೂ ಅನುಧಾನ ಕೊಟ್ಟಿಲ್ಲ. ಜೆಡಿಎಸ್ ನವರು ಯಾರನ್ನು ಸಹಿಸಲ್ಲ, ಅವರು ನೆಮ್ಮದಿಯಿಂದ ಇರಲ್ಲ, ಬೆಳಗ್ಗೆ ಎದ್ದರೇ ಏನಾದರೂ ವಿಚಾರವನ್ನ ತೆಗೆದುಕೊಂಡು ಸಂಚು ಮಾಡುತ್ತಾರೆ ಎಂದು ಕಿಡಿಕಾರಿದರು.
ಇನ್ನೂ ಬೊಮ್ಮಾಯಿ ಅವರ ಮೇಲೆ ಮೊದಲು ಕೇಸ್ ದಾಖಲಿಸಬೇಕು ನಾವು ಸರ್ಕಾರ ಬಂದ ಪ್ರಾರಂಭದಲ್ಲಿ ಅಭಿವೃದ್ಧಿ ವಿಚಾರದ ಕಡೆ ಗಮನಕೊಟ್ಟಿದ್ದೇವೂ ಪ್ರಾರಂಭದಲ್ಲೇ ಇವರ ಆರೋಪದ ಮೇಲೆ ದಾಳಿ ಮಾಡಬೇಕಿತ್ತು. ನಾವು ನಿಮ್ಮಂಗೆ ಡೂಪ್ಲಿಕೇಟ್ ದೂರು ನೀಡಲ್ಲ. ರಾಜ್ಯಪಾಲರನ್ನ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಕಾನೂನು ಬದ್ದವಾಗಿ ದೂರು ನೀಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಹಗರಣವನ್ನ ನಾವು ಬಿಡುವುದಿಲ್ಲ ಎಂದು ಹೇಳಿದರು.