HomeKarnataka Newsಸಿದ್ದರಾಮಯ್ಯ ಅವರು ಬಯಸಿದ್ದು ಅಧಿಕಾರವಷ್ಟೆ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕುಮಾರಸ್ವಾಮಿ

ಸಿದ್ದರಾಮಯ್ಯ ಅವರು ಬಯಸಿದ್ದು ಅಧಿಕಾರವಷ್ಟೆ ಹೊರತು ಜನಸಾಮಾನ್ಯರನ್ನಲ್ಲ: ನಿಖಿಲ್ ಕುಮಾರಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ಸಿದ್ದರಾಮಯ್ಯ ಅವರು ಬಯಸಿದ್ದು ಅಧಿಕಾರವಷ್ಟೆ ಹೊರತು ಜನಸಾಮಾನ್ಯರನ್ನಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕ್ರೀಡಾಂಗಣದಲ್ಲಿ  ನಡೆದ ಕಾರ್ಯಕ್ರಮಕ್ಕೂ, ಕಾಲ್ತುಳಿತಕ್ಕೂ ನಮಗೂ ಸಂಬಂಧವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಎಕ್ಸ್‌ನಲ್ಲಿ ಕಿಡಿಕಾರಿರುವ ಅವರು,

ಆರ್‌ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು. ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ.

11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದಾಗ, ಸಚಿವರ ಕುಟುಂಬಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಆದರೂ ಕೂಡ ಮುಖ್ಯಮಂತ್ರಿಗಳ ಪ್ರತಿಕ್ರಿಯೆ? ಅದು ನಮ್ಮ ಕಾರ್ಯಕ್ರಮವಾಗಿರಲಿಲ್ಲ. ಕ್ರೀಡಾಂಗಣವು ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ.

ಅದು ಪಾಕಿಸ್ತಾನವಲ್ಲ. ಇದು ನಿಮ್ಮ ರಾಜ್ಯ, ನಿಮ್ಮ ನಗರ, ನಿಮ್ಮ ಜನರು. ನೀವು ರಾಜ್ಯವನ್ನು ಮುನ್ನಡೆಸಲು ಆಯ್ಕೆಯಾದವರು, ಕಾರ್ಯಕ್ರಮದಲ್ಲಿ ಅತಿಥಿಯಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಿ. ಫೋಟೋ-ಶೋಗಳಿಗಾಗಿ ನಿಮ್ಮನ್ನು ನೇಮಿಸಲಾಗಿಲ್ಲ. ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ನೀವು ಮಾತ್ರ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಿರಿ ಎಂದು ಕಿಡಿಕಾರಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!