HomeKarnataka Newsಸಿದ್ದರಾಮಯ್ಯ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡ್ತಾರೆ: ಆರ್ ಅಶೋಕ್ ಕಿಡಿ

ಸಿದ್ದರಾಮಯ್ಯ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡ್ತಾರೆ: ಆರ್ ಅಶೋಕ್ ಕಿಡಿ

For Dai;y Updates Join Our whatsapp Group

Spread the love

ಬೆಂಗಳೂರು:- ಸಿದ್ದರಾಮಯ್ಯ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬೇಕಾದ್ರೆ ಬ್ಯಾನ್ ಮಾಡ್ತಾರೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ. ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅವರು ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ. ನಾವು ಪಾಕಿಸ್ತಾನದಲ್ಲಿವೋ ಕರ್ನಾಟಕದಲ್ಲಿದ್ದೀವೋ ಎಂಬ ಭ್ರಮೆ ಮೂಡುತ್ತಿದೆ. ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯನ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆ ಮಾಡುವುದು ಸಾರ್ವಜನಿಕ ರಸ್ತೆ. ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು.

ಇವರ ಯೋಗ್ಯತೆಗೆ ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ? ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಈ ತರಹ ಗೂಂಡಾಗಳು ಮಸೀದಿಯಲ್ಲಿ ಇರುತ್ತಾರೆ ಅಂತಾ ನಿಮಗೆ ಜ್ಞಾನ ಬೇಡವೇ. ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದೂ ಮೆರವಣಿಗೆ ವೇಳೆ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ. ಮಹಿಳಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಗಿದೆ. ಮುಂದಿನ ವರ್ಷ ಸಿದ್ದರಾಮಯ್ಯ ಕಾನೂನು ತಂದು ಗಣಪತಿ ಹಬ್ಬವನ್ನೇ ನಿಷೇಧ ಮಾಡುತ್ತಾರೆ. ಅಂತಹ ಸಿದ್ದರಾಮಯ್ಯ ಇವರು, ಅವರನ್ನು ನಂಬಬೇಡಿ ಎಂದು ಹರಿಹಾಯ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!