ಬೆಳಗಾವಿ: ಎಸ್ ಎಂ ಕೃಷ್ಣ ಸಾಹೇಬರ ನಿಧನ ಇಡೀ ರಾಜ್ಯಕ್ಕೆ ನಷ್ಟ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಾಪ ಸೂಚಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಸ್ ಎಂ ಕೃಷ್ಣ ಸಾಹೇಬರ ನಿಧನ ಇಡೀ ರಾಜ್ಯಕ್ಕೆ ನಷ್ಟ.
Advertisement
ದೇಶದ ರಾಜಕಾರಣದ ಎಲ್ಲ ಹುದ್ದೆ ನಿಭಾಯಿಸಿದ್ದವರು. ದೂರದೃಷ್ಟಿಯ ನಾಯಕರಾಗಿದ್ದ ಅವರು, ರಾಜ್ಯದ ಐಟಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ, ಇವತ್ತು ಅವರ ಅಗಲಿಕೆ ನನಗೆ ತುಂಬಾ ನೋವು ಉಂಟುಮಾಡಿದೆ ಎಂದು ಹೇಳಿದರು.
ಇನ್ನೂ ಅವರ ಅಗಲಿಕೆಯಿಂದ, ಅವರ ಕುಟುಂಬ ವರ್ಗದವರಿಗೆ ಮತ್ತು ಅಪಾರ ಅಭಿಮಾನಿ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.