• About
  • Advertise
  • Privacy & Policy
  • Contact
Sunday, November 15, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಅಮೂಲ್ಯವಾದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ: SM ಕೃಷ್ಣ ನಿಧನಕ್ಕೆ ಹೆಚ್ ಕೆ ಪಾಟೀಲ್ ಸಂತಾಪ

Vijaya Sakshi News Desk by Vijaya Sakshi News Desk
December 10, 2024
in Gadag News
ಅಮೂಲ್ಯವಾದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ: SM ಕೃಷ್ಣ ನಿಧನಕ್ಕೆ ಹೆಚ್ ಕೆ ಪಾಟೀಲ್ ಸಂತಾಪ
0
SHARES
1
VIEWS
Share on Facebook

ಗದಗ: ವಯೋಸಹಜ ಕಾಯಿಲೆಯಿಂದ ಇಂದು ತಡರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿರುವ ಅವರು, ಜನತೆಯ ಆರ್ಥಿಕ ಉತ್ಕರ್ಷಕ್ಕೆ ಕಾರಣವಾಗುವ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಮತ್ತು ಅಭಿವೃದ್ಧಿ ಗತಿಯ ಚಲನ ಶೀಲತೆಯನ್ನು ಸವಾಲಾಗಿ ಸ್ವೀಕರಿಸಿ,

ಪ್ರಾದೇಶಿಕ ಅಸಮತೋಲನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯ ಸದುದ್ದೇಶದಿಂದ ಶ್ರೀ ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಉನ್ನತಾಧೀಕಾರ ಸಮಿತಿಯನ್ನು ನೇಮಿಸಿ ಉತ್ತರ ಕರ್ನಾಟಕದ ಅಭಿವೃದ್ಧಿಪರ ಚಿಂತನೆಯನ್ನು ಎತ್ತರಕ್ಕೆ ಕೊಂಡೊಯ್ದ ಕಾಲಘಟ್ಟದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸನ್ಮಾನ್ಯ ಶ್ರೀ ಎಸ್.ಎಂ. ಕೃಷ್ಣ ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ.

ಶ್ರೀ ಡಿ.ಎಂ. ನಂಜುಂಡಪ್ಪ ಸಮಿತಿಯನ್ನು ನೇಮಕ ಮಾಡಬೇಕೆಂಬ ಸಲಹೆಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದ ಎಸ್.ಎಂ. ಕೃಷ್ಣ ಅವರನ್ನು ನಾನು ಅತ್ಯಂತ ಕೃತಾಂಜಲಿಯಿಂದ ನೆನೆಯುವೆ.

ನನ್ನ “ಚಲುವ ಕನ್ನಡ ನಾಡು ನನಸಾಗದ ಕನಸು” ಪುಸ್ತಕದ ಉಪಸಂಹಾರವನ್ನು 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭಾಗವನ್ನಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದ ಎಸ್.ಎಂ. ಕೃಷ್ಣ ನನ್ನೊಂದಿಗೆ ಸುದೀರ್ಘವಾಗಿ ಸಮಾಲೋಚಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಈ ಸಮಿತಿಯನ್ನು ನೇಮಿಸಿದ್ದು ಐತಿಹಾಸಿಕ ಘಟನೆ.

ಕೃಷ್ಣ-ಕಾವೇರಿ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಪ್ರತಿಯೊಬ್ಬ ನಾಗರೀಕನ ಆಶೋತ್ತರಗಳನ್ನು ಎಲ್ಲ ವೇದಿಕೆಗಳಲ್ಲಿ ಪ್ರತಿಪಾದಿಸಿದ ಎಸ್.ಎಂ. ಕೃಷ್ಣ ಜಲವಿವಾದಗಳ ವಿಷಯಗಳಲ್ಲಿ ಕರ್ನಾಟಕಕ್ಕೆ ನ್ಯಾಯ ತಂದುಕೊಡುವಲ್ಲಿ ಅವಿರತವಾಗಿ ಶ್ರಮ ವಹಿಸಿದರು. ಕರ್ನಾಟಕ ಪ್ರತಿದಿನ 10000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಆದೇಶ ಮಾಡಿದಾಗ ಆ ಆದೇಶವು ಪ್ರಧಾನಮಂತ್ರಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ಸಭೆ ಸೇರುವವರೆಗೂ ಮುಂದುವರೆಯುತ್ತದೆ ಎಂದು ಹೇಳಿ ಇಡೀ ಕರ್ನಾಟಕ ದಿಗ್ಬ್ರಮೆಗೊಂಡಾಗ ಅತ್ಯಂತ ಕಡಿಮೆ ಅವಧಿಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಸಿ ತಮಿಳುನಾಡಿಗೆ ನೀರು ಬಿಡುಗಡೆ ನಿಲ್ಲಿಸಿ ಕರ್ನಾಟಕಕ್ಕೆ ನ್ಯಾಯ ತಂದುಕೊಟ್ಟ ಕೀರ್ತಿಗೆ ಪಾತ್ರರಾದವರು.

ಈ ಸಂದರ್ಭದಲ್ಲಿ ಅಂದು ಅಧಿಕಾರದಲ್ಲಿದ್ದ ಬಿ.ಜೆ.ಪಿ ನಾಯಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಸರ್ವೋಚ್ಚ ನ್ಯಾಯಾಲಯದಿಂದ ನ್ಯಾಯಾಂಗ ನಿಂದನೆಯನ್ನು ಅಂದಿನ ಜಲಸಂಪನ್ಮೂಲ ಸಚಿವನಾಗಿದ್ದ ನನ್ನೊಂದಿಗೆ ಎದುರಿಸಿದರು. ಕೃಷ್ಣ ಕಾವೇರಿ ಜಲವಿವಾದಗಳಲ್ಲಿ, ಗಡಿವಿವಾದಗಳಲ್ಲಿ ರಾಜ್ಯದ ಹಿತವೇ ಶ್ರೇಷ್ಠ ಎನ್ನುವ ನಿಲುವನ್ನು ಸದಾವಕಾಲ ಪಾಲಿಸಿದವರು. ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಕಣಜ ಮತ್ತು ಕೇಂದ್ರಸ್ಥಾನವನ್ನಾಗಿ ಪರಿವರ್ತಿಸುವಲ್ಲಿ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯನ್ನಾಗಿ ಬದಲಾವಣೆಗೆ ಅಪಾರ ಕೊಡುಗೆ ನೀಡಿದ ಎಸ್.ಎಂ. ಕೃಷ್ಣ ಸಭ್ಯ, ಸುಸಂಸ್ಕೃತ ಮತ್ತು ಮುತ್ಸದ್ದಿ ಶ್ರೇಷ್ಠ ರಾಜಕಾರಣಿಗಳ ಸಾಲಿನ ಮುಂಚೂಣಿಯಲ್ಲಿದ್ದವರು.

ಅಂದು 1999ರಲ್ಲಿ ಉತ್ತರ ಕರ್ನಾಟಕದಿಂದ ಆಯ್ಕೆಯಾಗಿದ್ದ 48 ಶಾಸಕರು ಎಸ್.ಎಂ.ಕೃಷ್ಣ ಅವರಿಗೆ ಶಕ್ತಿಯಾಗಿ ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನದ ಬಹುದೊಡ್ಡ ಕೊಡುಗೆಯಾಗಿದ್ದಿತು. ನನ್ನನ್ನು ಹಾಗೂ ನನ್ನ ಸಹೋದರ ಡಿ.ಆರ್.ಪಾಟೀಲ ಅವರನ್ನು ಮಕ್ಕಳಂತೆ ಭಾವಿಸಿ ನಮ್ಮ ಏಳಿಗೆಯನ್ನು ಬಯಸಿದ ಎಸ್.ಎಂ ಕೃಷ್ಣ ನನ್ನನ್ನು ತಮ್ಮ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಇಲಾಖೆಯ ಸಚಿವನನ್ನಾಗಿ ಅಧಿಕಾರ ನೀಡಿದ ಕ್ಷಣಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಅತ್ಯಂತ ಮಹತ್ವದ ಕಾಲಘಟ್ಟದಲ್ಲಿ ನೀರಾವರಿ ಯೋಜನೆಗಳಿಗೆ ಅದರಲ್ಲೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯಂತ ಮಹತ್ವಾಕಾಂಕ್ಷಿ ಯೋಜನೆಗೆ ಆಮೆ ವೇಗವನ್ನು ತಪ್ಪಿಸಿ ಜಿಂಕೆ ವೇಗವನ್ನು ಒದಗಿಸಿದ ಖ್ಯಾತಿಗೆ ಪಾತ್ರರಾದವರು. ಕರ್ನಾಟಕದ ಮಹತ್ವದ ಜಲವಿವಾದಗಳ ಸಂದರ್ಭದಲ್ಲಿ ದೃಢವಾದ ನಿಲುವನ್ನು ಕರ್ನಾಟಕದ ಧ್ವನಿಯಾಗಿ ಗಟ್ಟಿಯಾಗಿ ಪ್ರತಿಪಾದಿಸುವಲ್ಲಿ ಕರ್ನಾಟಕದ ನಾಗರೀಕರಿಗೆ ಹೆಗಲಿಗೆ-ಹೆಗಲು ಕೊಟ್ಟವರು.

ಶ್ರೀ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು. ಆ ಸಂದರ್ಭದಲ್ಲಿ ನೆನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಯನ್ನು ಮಾರ್ಪಡಿಸಿ ಕಳಸಾ-ಬಂಡೂರಿ ಯೋಜನೆಗಳನ್ನಾಗಿ ಅತ್ಯಂತ ಚಾಕಚಕ್ಯತೆಯಿಂದ ಜಲಸಂಪನ್ಮೂಲ ಇಲಾಖೆ ಸಲ್ಲಿಸಿದ್ದ ಯೋಜನಾ ವರದಿಯನ್ನು ಅಂಗೀಕರಿಸಿದ ಮತ್ತು ಆ ಕಾರ್ಯಕ್ಕೆ ಚಾಲನೆ ನೀಡಿದ ಎಸ್.ಎಂ. ಕೃಷ್ಣ ಸಚಿವ ಸಂಪುಟದ ಕೊಡುಗೆಯನ್ನು ನಾನು ಕೃತಜ್ಞತೆಯನ್ನು ಸ್ಮರಿಸುತ್ತೇನೆ.

ಎಸ್.ಎಂ. ಕೃಷ್ಣ ಒಬ್ಬ ಮುತ್ಸದ್ದಿ ರಾಜಕಾರಣಿಯಾಗಿ, ಶಾಸಕನಾಗಿ, ವಿಧಾನಸಭೆಯ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಕರ್ನಾಟಕ ವಿಧಾನ ಮಂಡಳದ ಎರಡೂ ಸದನಗಳ ಸದಸ್ಯರಾಗಿ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಿ ಸಲ್ಲಿಸಿದ ಸೇವೆ ಅನುಪಮವಾದದ್ದು. ಕರ್ನಾಟಕ ಕಂಡ ಅಪರೂಪದ ಹಿರಿಯ ಚೈತನ್ಯವೊಂದು ಇಂದು ನಮ್ಮನ್ನು ಅಗಲಿ ನಾಡನ್ನು ಬಡವಾಗಿಸಿದೆ.

ರಾಷ್ಟ್ರಕ್ಕೆ ತುಂಬಲಾರದ ಹಾನಿಯಾಗಿದೆ. ಶ್ರೀಯುತ ಎಸ್.ಎಂ.ಕೃಷ್ಣ ಅವರ ನಿಧನದಿಂದ ಮಡುಗಟ್ಟಿರುವ ಶೋಕವನ್ನು ಶಕ್ತಿಯನ್ನು ಎಲ್ಲರಿಗೂ ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಾಘನನಾದ ಭಗವಂತನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್‌ ಹೇಳಿದ್ದಾರೆ.

Tags: Dr. HK PatilGadagkannadanewsKarnatakaSM Krishna passed awayVijayasakshivijayasakshinews
ShareSendShare
Previous Post

ಎಸ್ ಎಂ ಕೃಷ್ಣ ಸಾಹೇಬರ ನಿಧನ ಇಡೀ ರಾಜ್ಯಕ್ಕೆ ನಷ್ಟ: ಸಚಿವ ಸಂತೋಷ್ ಲಾಡ್ ಸಂತಾಪ

Next Post

ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ನಿಧನ!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ನಿಧನ!

ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ನಿಧನ!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಮಧುಮೇಹ ಇದ್ದರೆ ಚರ್ಮದಲ್ಲೂ ಕಾಣಿಸಿಕೊಳ್ಳುತ್ತಾ ತುರಿಕೆ? ನಿರ್ಲಕ್ಷಿಸಿದರೆ ಅಪಾಯ!

ಮಧುಮೇಹ ಇದ್ದರೆ ಚರ್ಮದಲ್ಲೂ ಕಾಣಿಸಿಕೊಳ್ಳುತ್ತಾ ತುರಿಕೆ? ನಿರ್ಲಕ್ಷಿಸಿದರೆ ಅಪಾಯ!

November 14, 2026
ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ವಂಚನೆ, ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರ: ಅನಿಲ ಮೆಣಸಿನಕಾಯಿ

ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ವಂಚನೆ, ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರ: ಅನಿಲ ಮೆಣಸಿನಕಾಯಿ

November 14, 2026
ಕಾಡಾನೆಗಳ ಅಟ್ಟಹಾಸಕ್ಕೆ ಬಡ ಮಹಿಳೆ ಬಲಿ; ಶವ ಮುಂದಿಟ್ಟು ಗ್ರಾಮಸ್ಥರ  ಆಕ್ರೋಶ!

ಕಾಡಾನೆಗಳ ಅಟ್ಟಹಾಸಕ್ಕೆ ಬಡ ಮಹಿಳೆ ಬಲಿ; ಶವ ಮುಂದಿಟ್ಟು ಗ್ರಾಮಸ್ಥರ ಆಕ್ರೋಶ!

November 14, 2026
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಮೆಟ್ರೋ ಪ್ರಯಾಣಿಕರೇ ಗಮನಿಸಿ; ಯೆಲ್ಲೋ ಲೈನ್‌ನಲ್ಲಿ ಕಾಯುವ ಸಮಯ ಕಡಿಮೆ, 13ನೇ ರೈಲು ಎಂಟ್ರಿ!

November 14, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಮಧುಮೇಹ ಇದ್ದರೆ ಚರ್ಮದಲ್ಲೂ ಕಾಣಿಸಿಕೊಳ್ಳುತ್ತಾ ತುರಿಕೆ? ನಿರ್ಲಕ್ಷಿಸಿದರೆ ಅಪಾಯ!

ಮಧುಮೇಹ ಇದ್ದರೆ ಚರ್ಮದಲ್ಲೂ ಕಾಣಿಸಿಕೊಳ್ಳುತ್ತಾ ತುರಿಕೆ? ನಿರ್ಲಕ್ಷಿಸಿದರೆ ಅಪಾಯ!

November 14, 2026
ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ವಂಚನೆ, ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರ: ಅನಿಲ ಮೆಣಸಿನಕಾಯಿ

ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ವಂಚನೆ, ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರ: ಅನಿಲ ಮೆಣಸಿನಕಾಯಿ

November 14, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper