ವಿಜಯಸಾಕ್ಷಿ ಸುದ್ದಿ, ಗದಗ : ಗದಗ ನಗರದ ಅಬ್ಬಿಗೇರಿ ಕಾಂಪೌಂಡ್ ನ ನಿವಾಸಿ ಶ್ರೀಮತಿ ವಾಲಿಬಾಯಿ ಸೋಹನರಾಜ್ ಜೀರಾವಾಲ (79) ಬುಧವಾರ ಮಧ್ಯಾಹ್ನ ನಿಧನರಾದರು. ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪ್ರೇರಣೆಯಿಂದ ಮೃತರ ನೇತ್ರಗಳನ್ನು ಕುಟುಂಬದವರು ದಾನ ಮಾಡಿದರು.
ಲಯನ್ಸ್ ಕ್ಲಬ್ ತಂಡ ಕೈಗೊಂಡ 16ನೇ ನೇತ್ರದಾನ ಇದಾಗಿದೆ. ಮರಣಾ ನಂತರ ನೇತ್ರಗಳನ್ನು ಸುಡದೆ, ಮಣ್ಣು ಮಾಡದೇ ಕುಟುಂಬದವರು ನೇತ್ರದಾನ ಮಾಡಲು ಮುಂದಾದರೆ, ಕಣ್ಣಿಲ್ಲದ ವ್ಯಕ್ತಿಗಳಿಗೆ ಮೃತರ ಕಣ್ಣುಗಳನ್ನು ಕಸಿ ಮಾಡುವ ಮೂಲಕ ಹೊರ ಜಗತ್ತನ್ನು ನೋಡುವಂತೆ ಮಾಡಲು ವೈದ್ಯಕೀಯ ಕ್ಷೇತ್ರದಲ್ಲಿ ಅವಕಾಶಗಳಿದ್ದು, ಮೃತರ ನೇತ್ರಗಳನ್ನು ದಾನ ಮಾಡಲು ಕುಟುಂಬದವರು ಮುಂದೆ ಬರಬೇಕೆಂದು ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರಾಲಯದ ತಜ್ಞರ ತಂಡ ನಗರಕ್ಕೆ ಆಗಮಿಸಿ ನೇತ್ರದಾನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ನೇತ್ರದಾನ ಮಾಡಿದ ಕುಟುಂಬದವರನ್ನು ಕ್ಲಬ್ ಪದಾಧಿಕಾರಿಗಳು ಅಭಿನಂದಿಸಿದರು.
ಜಯಂತ ಕವಾಡ ಅವರ ಪ್ರೇರಣೆಯಿಂದ ಈ ಕಾರ್ಯ ಸಾಕಾರಗೊಂಡಿತು.
ಈ ಸಂದರ್ಭದಲ್ಲಿ ಪ್ರವೀಣ ಶಹಾ, ಕಮಲೇಶ ಜೈನ್, ರೂಪಚಂದ ಪಾಲರೇಚ, ಶಾಂತಿಲಾಲ ಪಾಲರೇಚ, ಧೀರಜ್ ಪಾಲರೇಚ, ಯಶವಂತ ಪಾಲರೇಚ, ರಾಜು ಪಾಲರೇಚ, ವರ್ಧಮಾನ ಪಾಲರೇಚ ಸೇರಿದಂತೆ ಕ್ಲಬ್‌ನ ಸದಸ್ಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.