ವಿಜಯಸಾಕ್ಷಿ ಸುದ್ದಿ, ಮುಳಗುಂದ : ತಮ್ಮ ಜೀವನದ ಹಂಗು ತೊರೆದು ದೇಶದ ರಕ್ಷಣೆ ಮಾಡುವ ಸೈನಿಕರನ್ನು ಗೌರವದಿಂದ ಕಾಣಬೇಕು ಎಂದು ಎಸ್‌ಡಿಎಂಸಿ ಸದಸ್ಯ ಜಿ.ಎಂ. ಗಾಡಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ.1ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಎಸ್.ಡಿ. ಪಂಡಿತ ಅವರ ಮಗ ಹರೀಶ ನರೆಗಲ್ಲ ಅವರನ್ನು ಗೌರವಿಸಿ ಮಾತನಾಡಿ, ಹರೀಶ ಅತೀ ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇಂತಹ ಸೈನಿಕರನ್ನು ನಾವು ಸದಾ ಗೌರವಿಸಬೇಕು ಎಂದರು.
ಶಿಕ್ಷಕಿ ವಿ.ಎಂ. ಕಂಠಿ ಮಾತನಾಡಿದರು. ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಎಂ.ಎಂ. ಮೆಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್, ಎಚ್.ಆರ್. ಭಜೆಂತ್ರಿ, ಎಸ್.ಎಚ್. ಉಪ್ಪಾರ, ಟಿ.ವೀಣಾ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ಜ್ಯೋತಿ ಜಾಧಾವ, ಪವಿತ್ರಾ ಮಟ್ಟಿ, ಶಭಾನಾ ಡಾಲಾಯತ ಇದ್ದರು.