HomePolitics Newsಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದ ಎಲ್ಲರ ಗಮನ ಸೆಳೆದಿರುವ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಲಿ ಎಂದು ಕಾರ್ಯಕರ್ತರು ಮಹಾರಾಷ್ಟçದ ಅಹ್ಮದನಗರ ಜಿಲ್ಲೆಯ ಶಿರಡಿ ಸಾಯಿಬಾಬಾರವರ ಪವಿತ್ರ ಕ್ಷೇತ್ರದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ನಂತರ ಸಮೀಪದ ಸುಕ್ಷೇತ್ರ ಶನಿಸಿಂಗಣಾಪುರದಲ್ಲಿರುವ ಶ್ರೀ ಶನೇಶ್ವರ ಸ್ವಾಮಿಗೂ ವಿಶೇಷ ಪೂಜೆ, ತೈಲಾಭಿಷೇಕ ಸಲ್ಲಿಸಿದರು.

ಈ ಕುರಿತು ಮಾಹಿತಿ ನೀಡಿದ ಬಿಜೆಪಿ ಮುಖಂಡ ಹಾಗೂ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ, ಹಾವೇರಿ ಕ್ಷೇತ್ರದಲ್ಲಿ ಬೊಮ್ಮಾಯಿಯವರ ಆಯ್ಕೆಯಾಗಬೇಕು ಮತ್ತು ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಬೇಕೆನ್ನುವದು ಬಹುತೇಕ ಜನರ ಅಬಿಪ್ರಾಯವಾಗಿದ್ದು, ಅದಕ್ಕಾಗಿ ಅನೇಕ ಪವಿತ್ರ ಕ್ಷೇತ್ರಗಳಲ್ಲಿ ವಿಶೇಷ ಪೂಜೆಯನ್ನು ಕಾರ್ಯಕರ್ತರೊಂದಿಗೆ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಭಯ ಜೈನ್, ಚಂದ್ರು ಮಾಗಡಿ, ಪ್ರವೀಣ ಹೊಟ್ಟಿ, ಮಂಜುನಾಥ ಮುಳಗುಂದ ಸೇರಿದಂತೆ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!