ವಿಜಯಸಾಕ್ಷಿ ಸುದ್ದಿ, ಮುಳಗುಂದ : ಅಕ್ಟೋಬರ್ ರಜೆಯ ತರಬೇತಿಯನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಿಕ್ಷಕ ಪುಜಾರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ(ಆರ್‌ಎಂಎಸ್)ಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಆಯೋಜಿಸಿದ್ದ ವಿಶೇಷ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಕ್ಕಳಿಗೆ ಉತ್ತಮವಾದ ಮೈಲುಗಲ್ಲು. ಈ ಮೈಲುಗಲ್ಲನ್ನು ಯಾವುದೇ ಭಯವಿಲ್ಲದೆ, ಶ್ರದ್ಧೆಯಿಂದ, ಸತತ ಪರಿಶ್ರಮದಿಂದ ನಿತ್ಯ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದರಿಂದ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಡಿಪಿಇಪಿ ಶಾಲೆಯ ಅಧ್ಯಕ್ಷ ಮಾಹಾಂತೇಶ ಕೆಂಚನಾಯ್ಕರ ತಮ್ಮ ತನು, ಮನ, ಧನದಿಂದ ಸಹಾಯ ಸಹಕಾರದಿಂದ ಮಕ್ಕಳ ಏಳ್ಗೆಗಾಗಿ ಶ್ರಮಿಸಿದವರು. ಇಂತಹ ಶಿಕ್ಷಣ ಪ್ರೇಮಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಬಸವರಾಜ ಗೌರಿಮನಿ, ಮಹೇಶ ಕೊಂಡಿಕೊಪ್ಪ, ಇಸ್ಮಾಯಿಲ್ ಮುಜಾವಾರ, ಶರಣಬಸವ ಪೂಜಾರ, ಜಿ.ಎಂ. ಪಿರಂಗಿ, ಪಿ.ಸಿ. ಪಾಟೀಲ್. ಆರೀಫ್ ಶಿರಹಟ್ಟಿ, ಮಾಹಾಂತೇಶ ಮಾನೇಗಾರ, ಮಾಹಾಂತೇಶ ಕೆಂಚನಾಯ್ಕರ್ ಮುಂತಾದವರಿದ್ದರು.