ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಅಬ್ಬಿಗೇರಿಯ ಶ್ರೀ ಅನ್ನದಾನ ವಿಜಯ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವು ಶೇ. 62.5ರಷ್ಟಾಗಿದೆ ಎಂದು ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಪ್ರಶಸ್ತಿ ಸಹಿತ ಅತ್ಯುನ್ನತ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು, 3 ವಿದ್ಯಾರ್ಥಿಗಳು ಪಾಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶಾಲೆಗೆ ಪ್ರಥಮ ಸ್ಥಾನವನ್ನು ಸೌಮ್ಯ ಬಸವರಡ್ಡೇರ (625/584) ಶೇ. 93.44, ದ್ವಿತೀಯ ಸ್ಥಾನವನ್ನು ಸಂಜನಾ ನೀರಲೋಟಿ (625/573) ಶೇ. 91.68. ತೃತೀಯ ಸ್ಥಾನವನ್ನು ಸಿಂಚನಾ ವೀರಾಪೂರ (625/571) ಶೇ. 91.36, ವೀಣಾ ಒಂಟೇಲಿ (625/562) ಶೇ. 90 ಅಂಕಗಳನ್ನು ಪಡೆದುಕೊಂಡಿದ್ದಾರೆ.