ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸುಕ್ಷೇತ್ರ ಕುರ್ತಕೋಟಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ 30ನೇ ವರ್ಷದ ಪುರಾಣ ಪ್ರವಚನ ಹಾಗೂ 24ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಡೊಳ್ಳು, ಭಜನೆ, ಕುಂಭ, ಕಳಸ, ಕನ್ನಡಿಯೊಂದಿಗೆ ವೈಭವದೊಂದಿಗೆ ಜರುಗಿತು.
ಕಾರ್ಯಕ್ರಮದ ನೇತೃತ್ವವನ್ನು ಪರಮಪೂಜ್ಯ ಶ್ರೀ ಕುಮಾರ ದೇವರು ಬೂದಿಸ್ವಾಮಿ ಹಿರೇಮಠ ಅಂತೂರ-ಬೆಂತೂರ, ಮ. ಘ. ಚ. ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ರಾಜೂರ-ಗದಗ, ಷ. ಬ್ರ. ಶ್ರೀ. ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಓಂಕಾರೇಶ್ವರ ಹಿರೇಮಠ ಕಳಸಾಪುರ-ಮಲ್ಲಸಮುದ್ರ-ಸೊರಟೂರ ವಹಿಸಿದ್ದರು. ಅಪ್ಪಣ್ಣ ಇನಾಮತಿ, ವೀರೇಶ ಕೂಗುಮಠ, ಚಂದ್ರಶೇಖರ ನಾಗವಿಮಠ, ಅಶೋಕ ಶಿರಹಟ್ಟಿ ಸೇರಿದಂತೆ ಸಕಲ ಭಕ್ತರು ಭಾಗವಹಿಸಿದ್ದರು.