ಬೆಂಗಳೂರು:- 2020ನೇ ಸಾಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್, ಅಕ್ಷತಾ ಪಾಂಡವಪುರ, ಪ್ರಥ್ವಿ ಕೋಣನೂರು ಸೇರಿದಂತೆ ಹಲವು ನಟ, ನಟಿಯರು, ನಿರ್ದೇಶಕ, ಗಾಯಕ, ತಂತ್ರಜ್ಞರು ಈ 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೇಂಟಲ್ ಮ್ಯಾನ್ ಸಿನಿಮಾದ ನಟನೆಗಾಗಿ ಪ್ರಜ್ವಲ್ ದೇವರಾಜ್ ಅವರಿಗೆ ʼಅತ್ಯುತ್ತಮ ನಟʼ ಪ್ರಧಾನವಾಗಿದೆ.. ಪಿಂಕಿ ಎಲ್ಲಿ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಪಾಂಡಪುರ ಅವರಿಗೆ ʼಅತ್ಯುತ್ತಮ ನಟಿʼ ಪ್ರಶಸ್ತಿ ಲಭಿಸಿದೆ.
ತಲೆ ದಂಡ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ರಮೇಶ್ ಪಂಡಿತ್ ಅವರಿಗೆ ʼಅತ್ತ್ಯುತ್ತಮ ಪೋಷಕ ನಟʼ ಪ್ರಶಸ್ತಿ ಸಿಕ್ಕಿದೆ.. ಜೊತೆಗೆ ದಂತ ಪುರಾಣ ಸಿನಿಮಾದಲ್ಲಿನ ಅಭಿನಯಕ್ಕಾಗಿ ಮಂಜುಳಮ್ಮ ಅವರಿಗೆ ʼಅತ್ತ್ಯುತ್ತಮ ಪೋಷಕ ನಟಿʼ ಪ್ರಶಸ್ತಿ ನೀಡಲಾಗಿದೆ. ಈ ʼಪಿಂಕಿ ಎಲ್ಲಿʼ ಚಿತ್ರಕ್ಕೂ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ.. ʼವರ್ಣಪಟಲʼ ಸಿನಿಮಾಗೆ ಎರಡನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ.. ʼಹರಿವ ನದಿಗೆ ಮೈಯೆಲ್ಲ ಕಾಲುʼ ಸಿನಿಮಾಗೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.. ʼಪದಕʼ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ಪ್ರಧಾನವಾಗಿದೆ..