ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.6ರಂದು ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಪಟ್ಟಣದಿಂದ ದೊಡ್ಡೂರ ರಸ್ತೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಸ್ಫರ್ಧೆ ನಡೆಯಲಿದೆ. 1 ನಿಮಿಷದ ಸ್ಪರ್ಧೆ ಇದಾಗಿದ್ದು, ಪ್ರಥಮ ಬಹುಮಾನ ಬೈಕ್, ದ್ವಿತೀಯ ಬಹುಮಾನ 50 ಸಾವಿರ ರೂ, ತೃತೀಯ ಬಹುಮಾನ 40 ಸಾವಿರ, 4 ಮತ್ತು 5ನೇ ಬಹುಮಾನವಾಗಿ 24 ಸಾವಿರ ರೂ ಸೇರಿ ಒಟ್ಟು 18 ಬಹುಮಾನಗಳಿವೆ. ಅತಿಥಿಗಳಾಗಿ ಕೆ.ಈ. ಕಾಂತೇಶ, ಆನಂದ ತಟ್ಟಿ, ಸಮ್ಮೇದ ಗೋಗಿ, ಎಲ್.ಎಸ್. ಅರಳಹಳ್ಳಿ ಸೇರಿ ಹಲವರು ಆಗಮಿಸುವರು ಎಂದು ಸಂಘಟಕರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು ತಿಳಿಸಿದ್ದಾರೆ.



