ನಾಳೆಯಿಂದ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಪ್ಲೋರ್ ಬಾಲ್ ಪಂದ್ಯಾವಳಿಗಳು ಇದೇ ಡಿ. 23 ಹಾಗೂ 24ರಂದು ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಎಸ್.ಬಿ. ಮಸನಾಯಕ್ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಚಾರ್ಯರ ಸಂಘ, ಪ.ಪೂ ಮಹಾವಿದ್ಯಾಲಯಗಳ ನೌಕರರ ಸಂಘ, ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಪ.ಪೂ ಶಿಕ್ಷಣ ಇಲಾಖೆ ಬೋಧಕೇತರ ಸಂಘದ ಆಶ್ರಯದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.

ಡಿ. 22ರಂದು ಸಂಜೆ 4 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಊಟ, ವಸತಿ ವ್ಯವಸ್ಥೆ, ನೋಂದಾಯಿತ ಸ್ಥಳಗಳಿಗೆ ತೆರಳಲು ವಾಹನ ಸೌಕರ್ಯ ಕಲ್ಪಿಸಲಾಗಿದೆ. ಇದು ರಾಜ್ಯಮಟ್ಟಕ್ಕೆ ಸೀಮಿತವಾದ ಕ್ರೀಡೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗದಗ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ತಂಡಗಳು ಆಗಮಿಸಲಿವೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಎನ್. ಕುರ್ತಕೋಟಿ, ಎಂ.ಸಿ. ಕಟ್ಟಿಮನಿ, ಎನ್.ಎಂ. ಪವಾಡಿಗೌಡ್ರ, ಅಶೋಕ ಅಂಗಡಿ, ಎಸ್.ಎಸ್. ಸೋಮಣ್ಣವರ, ವೈ.ಸಿ. ಪಾಟೀಲ, ಬಿ.ಜಿ. ಗಿರಿತಮ್ಮಣ್ಣವರ, ವಿ.ಎಂ. ಪಾಟೀಲ, ವಿ.ಎಸ್. ದಬಾಲಿ, ಅರ್ಜುನ ಗೊಳಸಂಗಿ, ದತ್ತಪ್ರಸನ್ ಪಾಟೀಲ, ಎಂ.ಕೆ. ಲಮಾಣಿ, ಎಚ್.ಎಸ್. ಶಿವಪ್ಪಯ್ಯನಮಠ, ವೈ.ಎಸ್. ಹುನಗುಂದ ಉಪಸ್ಥಿತರಿದ್ದರು.

ಹಿಂದಿನ ವರ್ಷ ರಾಜ್ಯಮಟ್ಟದದ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ವರ್ಷ ಫ್ಲೋರ್ ಬಾಲ್ ಪಂದ್ಯಾವಳಿ ನಡೆಸುವ ಅವಕಾಶ ಒದಗಿಬಂದಿದೆ. ಈವರೆಗೆ 15 ಬಾಲಕರು ಮತ್ತು ಬಾಲಕಿಯರ ತಂಡ ಒಳಗೊಂಡು 500 ಜನ ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದು, ಇನ್ನಷ್ಟು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಸ್.ಬಿ. ಮಸನಾಯಕ್ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here