ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪವರ್ ಫೈಟ್ ಈಗ ಸಂಪೂರ್ಣವಾಗಿ ದೆಹಲಿಗೆ ಶಿಫ್ಟ್ ಆಗಿದ್ದು, ಹೈಕಮಾಂಡ್ ಭೇಟಿ ಸುತ್ತ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ಸಿಎಂ ಭೇಟಿ ಮುನ್ನವೇ ಡಿಕೆ ಬ್ರದರ್ಸ್ ದೆಹಲಿಯಲ್ಲಿ ನೆಲೆಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು 45 ನಿಮಿಷಗಳ ಸುದೀರ್ಘ ಮಾತುಕತೆ ನಡೆಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಗದಿಯಾಗಿರುವ ಭೇಟಿಯ ಜೊತೆಗೆ ಹೈ ಕಮಾಂಡ್ ನಾಯಕರುಗಳನ್ನೂ ಭೇಟಿ ಮಾಡುವ ಸಾಧ್ಯತೆಗಳಿವೆ.ಸಿಎಂ ಸಿದ್ದರಾಮಯ್ಯ ಇಂದು ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ..
ಕಬ್ಬು ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆಗಳು, ಬೆಂಬಲ ಬೆಲೆ ಕುರಿತು ಪ್ರಧಾನಿ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯದ ನೀರಾವರಿ ಯೋಜನೆಗಳು, ಜಿಎಸ್‌ಟಿ ಪರಿಹಾರ, ಮಳೆ ಹಾನಿ ಪರಿಹಾರ ನೀಡುವಂತೆ ಮೋದಿಗೆ ಮನವಿ ಮಾಡಲಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶಗಳು ಹೊರಬಂದ ನಂತರ ರಾಜ್ಯ ರಾಜಕೀಯದ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಹೆಚ್ಚಿದ್ದು, ಕಾಂಗ್ರೆಸ್ ನಾಯಕತ್ವ ಬದಲಾವಣೆ ಸಾಧ್ಯತೆಯ ನಡುವೆ ನವೆಂಬರ್‌ಕ್ರಾಂತಿ ಚರ್ಚೆಗಳು ಮತ್ತೆ ತೆರೆಕಂಡಿವೆ.



