ಕೊಪ್ಪಳ:- ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಮಾಜಿ ಶಾಸಕ ದಡೇಸೂಗುರು ಕಾರಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ.
Advertisement
ರಸ್ತೆಯಲ್ಲಿ ಕಾರು ಹೋಗುತ್ತಿದ್ದಾಗ, ಮರೆಯಲ್ಲಿ ನಿಂತು ಕಿಡಿಗೇಡಿಗಳು ಕಾರಿಗೆ ಕಲ್ಲು ಎಸೆದಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಈ ಹಿನ್ನೆಲೆ ನಾನು ಗನ್ ಮ್ಯಾನ್ ಕೇಳಿದ್ದೇನೆ. ಆದರೆ, ಕೊಪ್ಪಳ ಎಸ್‌ಪಿ ನನಗೆ ಗನ್ ಮ್ಯಾನ್ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಪ್ರಭಾವಕ್ಕೆ ಮಣಿದಿರುವ ಎಸ್‌ಪಿ, ಗನ್ ಮ್ಯಾನ್ ನೀಡಲು ನಿರಾಕರಿಸಿದ್ದಾರೆ ಎಂದು ದಡೆಸುಗೂರು ಆರೋಪ ಮಾಡಿದ್ದಾರೆ.
ಹಲವು ದಿನಗಳಿಂದ ನನಗೆ ಬೆದರಿಕೆ ಇದೆ. ರಕ್ಷಣೆಗೆ ಗನ್ ಮ್ಯಾನ್ ಬೇಕು ಎಂದು ಮನವಿ ಮಾಡಿದ್ದಾರೆ.