ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಭರ್ಜರಿಯಾಗಿ ಸದ್ದು ಮಾಡುತ್ತಿರುವ ಸಂಚಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಂಚಿತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಮೊದಲ ಸಿನಿಮಾದ ಟೈಟಲ್ ಆನೌನ್ಸ್ ಆಗಿದೆ.
ಸುದೀಪ್ ಅಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ನಟನ ಫಸ್ಟ್ ಲುಕ್ ನೋಡುಗರ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಟೈಟಲ್ ಇಡಲಾಗಿದೆ. ಮೈಸೂರಿನ ಕಥೆ ಇರುವ ಈ ಸಿನಿಮಾದಲ್ಲಿ ಸಂಚಿತ್ ರೆಟ್ರೋ ಗೆಟಪ್‌ನಲ್ಲಿ ಮಿಂಚಿದ್ದಾರೆ.
ವಿವೇಕ್ ಎಂಬುವವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸಂಚಿತ್ ಮ್ಯಾಂಗೋ ಪಚ್ಚ ಎಂಬ ಪಾತ್ರದಲ್ಲಿ ಕಾಣಿಸಿದಕೊಳ್ತಿದ್ದಾರೆ. ಸದ್ಯ ರಿಲೀಸ್ ಆಗರುವ ಪ್ರೋಮೋದಲ್ಲಿ ಸಂಚಿತ್ ಸಿಗರೇಟ್ ಸೇದುವ ಶೈಲಿಯಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕೆಆರ್‌ಜಿ ಸಂಸ್ಥೆ ಜೊತೆ ಪ್ರಿಯಾ ಸುದೀಪ್ ಕೈಜೋಡಿಸಿದ್ದಾರೆ.
‘ಕ್ರೇಜಿ ಸ್ಟಾರ್’ ಹೆಸರಿನ ಬಾರ್ಗೆ ಇಬ್ಬರ ಆಗಮನ ಆಗುತ್ತದೆ. ಇದರಲ್ಲಿ ಒಬ್ಬರು ವಿದೇಶಿ ಮಹಿಳೆ. ಮತ್ತೋರ್ವ ಲೋಕಲ್ ಗೈಡ್. ‘ಪ್ರಳಯಾಂತಕ’ ಹೆಸರಿನ ಟೇಬಲ್ ಮೇಲೆ ವಿದೇಶಿ ಮಹಿಳೆ ಕೂರಲು ಹೋಗುತ್ತಾರೆ. ಆದರೆ, ಅಲ್ಲಿ ಕೂರಬೇಡಿ ಎಂದು ಎಲ್ಲರೂ ಕೋರುತ್ತಾರೆ. ಆ ಪ್ರಳಯಾಂತಕ ಟೇಬಲ್ ರಿಸರ್ವ್ ಆಗಿರೋದು ಪಚ್ಚನಿಗೆ! ಆಗ ಕಥಾ ನಾಯಕನ ಎಂಟ್ರಿ ಆಗುತ್ತದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋನ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.