ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾಗೆ ಸೈಲೆಂಟ್ ಪ್ರಮೋಷನ್ ಶುರುಮಾಡಿದ್ದಾರೆ ಅನ್ನೋ ಮಾತು ಈಗ ನಿಜವಾಗಿದೆ. ಹೊಸ ವರ್ಷದ ಸಂದರ್ಭದಲ್ಲೇ ‘ಅಣ್ತಮ್ಮ ಜೋಡೆತ್ತು ಕಣೋ..’ ಹಾಡನ್ನು ಬಿಡುಗಡೆ ಮಾಡಿ, ಅದರ ಕೊನೆಯಲ್ಲಿ ಸಿನಿಮಾ ರಿಲೀಸ್ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ 2026ರ ಏಪ್ರಿಲ್ 30ರಂದು ತೆರೆಗೆ ಬರಲಿದೆ. ‘ಮಾರ್ಟಿನ್’ ಬಳಿಕ ಧ್ರುವ ನಟನೆಯ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಶೂಟಿಂಗ್‌ಗೆ ಸಾಕಷ್ಟು ಸಮಯ ಕೊಟ್ಟಿರುವ ಪ್ರೇಮ್, ಚಿತ್ರವನ್ನು ಪರ್ಫೆಕ್ಷನ್‌ನೊಂದಿಗೆ ರೂಪಿಸುತ್ತಿದ್ದಾರೆ.
ಹಾಡಿನ ಬಗ್ಗೆ ಮಾತನಾಡುವುದಾದರೆ, ‘ಅಣ್ತಮ್ಮ ಜೋಡೆತ್ತು ಕಣೋ..’ ಪಕ್ಕಾ ಫ್ರೆಂಡ್‌ಶಿಪ್ ಫೀಲ್ ಇರುವ ಹಾಡಾಗಿದೆ. ಜೋಗಿ ಪ್ರೇಮ್ ಅವರೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಹಾಗೂ ಬಿಎಸ್ ಮಂಜುನಾಥ್ ಅವರ ಸಾಹಿತ್ಯ ಹಾಡಿಗೆ ಮತ್ತಷ್ಟು ಎನರ್ಜಿ ತುಂಬಿದೆ. ಧ್ರುವ ಸರ್ಜಾ ಜೊತೆಗೆ ರಮೇಶ್ ಅರವಿಂದ್ ಮತ್ತು ಸಂಜಯ್ ದತ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಕರ್ಷಣೆ.
ಏಪ್ರಿಲ್ ತಿಂಗಳಲ್ಲಿ ದೊಡ್ಡ ಸಿನಿಮಾಗಳ ಕ್ಲ್ಯಾಶ್ ಇಲ್ಲದಿರುವುದು ‘ಕೆಡಿ’ಗೆ ಪ್ಲಸ್ ಪಾಯಿಂಟ್ ಆಗಿದೆ. ಐಪಿಎಲ್ ಪಂದ್ಯಗಳು ಒಂದಷ್ಟು ಸ್ಪರ್ಧೆ ನೀಡಬಹುದಾದರೂ, ಶಾಲಾ ರಜೆಗಳು ಸಿನಿಮಾಗೆ ಒಳ್ಳೆಯ ಬೂಸ್ಟ್ ಕೊಡಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ‘ಕೆಡಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಅಬ್ಬರ ಮಾಡುವ ನಿರೀಕ್ಷೆ ಮೂಡಿಸಿದೆ.



