ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಳೆಯಿಂದ ರೈತರಿಗೆ ಉಂಟಾಗಿರುವ ಬೆಳೆ ಹಾನಿ ಪರಿಹಾರ ಒದಗಿಸಿಕೊಡುವ ಸಂಬಂಧ ಗದಗ ತಾಲೂಕಿನ ಮುಳಗುಂದ ಪಟ್ಟಣದ ಜಮಿನುಗಳಿಗೆ ತಹಸೀಲ್ದಾರ ಶ್ರೀನಿವಾಸ ಮೂರ್ತಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರವಣ್ಣವರ ಭೇಟಿ ನೀಡಿ ಪರಿಶೀಲಿಸಿದರು.
Advertisement
ಮುಳಗುಂದ ಪಟ್ಟಣದಲ್ಲಿನ ರೈತರ ಜಮಿನುಗಳಿಗೆ ಮಳೆಯಿಂದ ಹಾನಿಯಾದ ಹೆಸರು ಬೆಳೆ, ಗೋವಿನ ಜೋಳ, ಶೇಂಗಾ ಬೇಳೆಗಳನ್ನು ಪರಿಶೀಲಿಸಿದ ತಹಸೀಲ್ದಾರರು, ಸತತವಾಗಿ ಬಿದ್ದ ಮಳೆಯಿಂದ ರೈತರು ಬೆಳೆದ ಹೆಸರು, ಶೇಂಗಾ, ಗೋವಿನ ಜೋಳ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಈ ಕುರಿತು ಜಿಲ್ಲಾಧಿಕಾರಿಗಳಿಗ ಗಮನಕ್ಕೆ ತರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆರ್‌ಐ ಹಡಗಲಿಮಠ, ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ, ಪ.ಪಂ ಸದಸ್ಯ ಮಾಹಾದೇವಪ್ಪ ಗಡಾದ, ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ, ಮಾಹಾಂತೇಶ ಗುಂಜಳ, ಹಾಗೂ ರೈತ ಸಂಘದ ಸದಸ್ಯರು ಇದ್ದರು.