• About
  • Advertise
  • Privacy & Policy
  • Contact
Saturday, October 31, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಆ.24ರಂದು ದ್ವಿತೀಯ ಕದಳಿ ಮಹಿಳಾ ಸಮ್ಮೇಳನ 

Vijaya Sakshi News Desk by Vijaya Sakshi News Desk
August 20, 2025
in Gadag News
ಆ.24ರಂದು ದ್ವಿತೀಯ ಕದಳಿ ಮಹಿಳಾ ಸಮ್ಮೇಳನ 
0
SHARES
2
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಗದಗ: ಆಗಸ್ಟ್ 24ರಂದು ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನ ನಡೆಯಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ರಾಷ್ಟ್ರ ದ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣವನ್ನು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ನೇರವೆರಿಸಲಿದ್ದಾರೆ ಎಂದು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಶರಣ ಚಿಂತಕ ಕೆ.ಎಚ್. ಬೇಲೂರ, ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷರುಗಳಾದ ಡಾ. ಶಿವಪ್ಪ ಕುರಿ, ಡಾ. ಶರಣು ಗೋಗೇರಿ, ಶರಣ ಚಿಂತಕರಾದ ಲಲಿತಾ ಕೆರಿಮನಿ ಹಾಗೂ ಡಾ. ಎಸ್.ಸಿ. ಚವಡಿ ಮುಂತಾದವರು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮ.ನಿ.ಪ್ರ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ವಹಿಸುವರು. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಸುಧಾ ಎಸ್.ಹುಚ್ಚಣ್ಣವರ ಮಾತನಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿ.ಪ ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಜಿಲ್ಲೆಯ ಏಳು ತಾಲೂಕಿನ ಪ್ರತಿಯೊಬ್ಬರನ್ನು `ಶಿವಶರಣೆ ಮುಕ್ತಾಯಕ್ಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ನಂತರ ಚಿಂತನಾಗೋಷ್ಠಿ ಭಾಗ-1 ನಡೆಯಲಿದ್ದು, ಸಾನ್ನಿಧ್ಯವನ್ನು ಶಿವಶರಣೆ ಡಾ. ನೀಲಮ್ಮ ತಾಯಿ ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಡಾ. ಅರ್ಜುನ ಗೋಳಸಂಗಿ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯಕ್ಕೆ ಗದಗ ಜಿಲ್ಲೆಯ ಮಠಮಾನ್ಯಗಳ ಕೊಡುಗೆ ಕುರಿತು ಸಿದ್ದು ಯಾಪಲಪರವಿ ಉಪನ್ಯಾಸ ನೀಡಲಿದ್ದು, `12 ನೇ ಶತಮಾನದ ಆಲಕ್ಷಿತ ವಚನಕಾರ್ತಿಯರು’ ಎಂಬ ವಿಷಯದ ಕುರಿತು ಡಾ. ವಿಜಯಲಕ್ಷ್ಮೀ ಗೇಟಿಯವರ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಚಿಂತನಾಗೋಷ್ಠಿ ಭಾಗ-2 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಸೋಮರೆಡ್ಡಿ ಬಸಾಪೂರ ವಹಿಸಿಕೊಳ್ಳಲಿದ್ದಾರೆ. ಉಪನ್ಯಾಸಕರಾಗಿ ಸಿದ್ದಣ್ಣ ಜಗಭಾಳ ಆಗಮಿಸಲಿದ್ದು, ಇವರು `ಜಾನಪದ ಸಾಹಿತ್ಯದಲ್ಲಿ ಬಸವೇಶ್ವರರು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಸಾಯಂಕಾಲ 4.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಬೈರನಹಟ್ಟಿಯ ಶ್ರೀ ಶಾಂತಲಿAಗ ಮಹಾಸ್ವಾಮೀಜಿ ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಸಮಾರೋಪ ನುಡಿಗಳನ್ನು ಸುಶೀಲ ಸೋಮಶೇಖರ ನುಡಿಯಲ್ಲಿದ್ದಾರೆ ಎಂದು ಸುಧಾ ಹುಚ್ಚಣ್ಣವರ ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಎ ಬಳಿಗೇರ, ಸೀತಾ ಬಸಾಪೂರ, ಸುಕನ್ಯಾ ಸಾಲಿ, ಪ್ರತಿಭಾ ಹೊಸಮನಿ, ಸುಲೋಚನಾ ಐಹೊಳೆ, ಅಶ್ವಿನಿ ಅಂಕಲಕೋಟಿ, ಎಸ್.ಎಂ. ಮರಿಗೌಡ್ರ, ಶೇಖಣ್ಣ ಕವಳಿಕಾಯಿ, ಪ್ರಕಾಶ ಅಸುಂಡಿ, ಪ್ರೇಮಾ ಮೇಟಿ, ಐ.ಬಿ. ಬೆನಕೊಪ್ಪ, ಎಂ.ಕೆ. ಲಮಾಣಿ, ಅಶೋಕ ಹಾದಿ, ಬೂದಪ್ಪ ಅಂಗಡಿ ಉಪಸ್ಥಿತರಿದ್ದರು.

1919ರಲ್ಲಿ ಲಕ್ಷ್ಮೇಶ್ವರದಲ್ಲಿ ಮೊಟ್ಟ ಮೊದಲು ಕದಳಿ ಮಹಿಳಾ ಸಮ್ಮೇಳನ ನಡೆದಿತ್ತು. 2025ರಲ್ಲಿ ಮತ್ತೆ ಗದಗ ನಗರದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಶರಣ ಸಾಹಿತ್ಯ ಪರಿಷತ್ತನ್ನು ಸುತ್ತೂರು ಮಠದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ಹುಟ್ಟು ಹಾಕಿದರು. ಶರಣರ ಮೌಲ್ಯಗಳನ್ನು ಬಿತ್ತರಿಸಿ ಸಮಾಜ ಸುಧಾರಿಸಲು ಈ ಪರಿಷತ್ತು ಉದಯವಾಗಿದೆ.

– ಕೆ.ಎ. ಬಳಿಗೇರ.

ಶ.ಸಾ.ಪ ಜಿಲ್ಲಾಧ್ಯಕ್ಷರು.

Tags: BreakingNewsgadagnewsKarnatakaVijayasakshivijayasakshinews
ShareSendShare
Previous Post

ಕಳಕಪ್ಪ ಬಂಡಿ ಅವಧಿಯಲ್ಲಿ ಅನುದಾನದ ಹೊಳೆ

Next Post

ಬೆಳೆ ಹಾನಿ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಬೆಳೆ ಹಾನಿ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ

ಬೆಳೆ ಹಾನಿ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ!

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ!

October 31, 2026
ತಮಿಳುನಾಡಿನಲ್ಲಿ 17 ಖೈದಿಗಳು ಜೈಲಿನಿಂದ ಪರಾರಿ ಪ್ರಕರಣ: ಎಲ್ಲರೂ ಮತ್ತೆ ಬಂಧನ, ಉಪಜೈಲರ್ ಅಮಾನತು!

ತಮಿಳುನಾಡಿನಲ್ಲಿ 17 ಖೈದಿಗಳು ಜೈಲಿನಿಂದ ಪರಾರಿ ಪ್ರಕರಣ: ಎಲ್ಲರೂ ಮತ್ತೆ ಬಂಧನ, ಉಪಜೈಲರ್ ಅಮಾನತು!

October 31, 2026
ಸೌಜನ್ಯ ಕೊಲೆ ಪ್ರಕರಣದ ಸತ್ಯಶೋಧನೆಗೆ SIT ಕಸರತ್ತು: ಶವ ಪತ್ತೆಯಾದ ಜಾಗದಲ್ಲೇ ಕ್ರೈಂ ಸೀನ್ ಮರುಸೃಷ್ಟಿ

ಸೌಜನ್ಯ ಕೊಲೆ ಪ್ರಕರಣದ ಸತ್ಯಶೋಧನೆಗೆ SIT ಕಸರತ್ತು: ಶವ ಪತ್ತೆಯಾದ ಜಾಗದಲ್ಲೇ ಕ್ರೈಂ ಸೀನ್ ಮರುಸೃಷ್ಟಿ

October 31, 2026
ಎಲೆಕ್ಟ್ರಿಕ್ ವಾಹನಗಳ ತೆರಿಗೆ ಹಿಂಪಡೆದು ಜನರ ಮೇಲೆ ಬರೆ – ಕರ್ನಾಟಕ ಸರ್ಕಾರ ದಿವಾಳಿ ಸ್ಥಿತಿಯಲ್ಲಿ: ಪ್ರಹ್ಲಾದ್ ಜೋಶಿ ಕಿಡಿ

ಜನರಿಗೆ ಮೊಸರು ಕೊಟ್ಟು ಸರ್ಕಾರ ಬೆಣ್ಣೆ ತಿನ್ನುತ್ತಿದೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ವಾಗ್ದಾಳಿ

October 31, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ!

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ!

October 31, 2026
ತಮಿಳುನಾಡಿನಲ್ಲಿ 17 ಖೈದಿಗಳು ಜೈಲಿನಿಂದ ಪರಾರಿ ಪ್ರಕರಣ: ಎಲ್ಲರೂ ಮತ್ತೆ ಬಂಧನ, ಉಪಜೈಲರ್ ಅಮಾನತು!

ತಮಿಳುನಾಡಿನಲ್ಲಿ 17 ಖೈದಿಗಳು ಜೈಲಿನಿಂದ ಪರಾರಿ ಪ್ರಕರಣ: ಎಲ್ಲರೂ ಮತ್ತೆ ಬಂಧನ, ಉಪಜೈಲರ್ ಅಮಾನತು!

October 31, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper