BBK11: ಚಡ್ಡಿ, ಪ್ಯಾಂಟ್ ಬಿಚ್ಚೋ ಬಗ್ಗೆ ಮಾತಾಡುತ್ತಾರೆ: ಲಾಯರ್ ಜಗದೀಶ್ ಬಗ್ಗೆ ಹಂಸಾ ಬೇಸರ!

0
Spread the love

ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ಅದರಲ್ಲಿಯೂ ಲಾಯರ್ ಜಗದೀಶ್ ಕಾಟಕ್ಕೆ ಮನೆ ಮಂದಿ ಸುಸ್ತಾದರೆ, ಶೋ ವೀಕ್ಷಿಸುತ್ತಿರುವ ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ.

Advertisement

ಅದರಂತೆ ಬಿಗ್ ಬಾಸ್ ಮನೆಯಲ್ಲಿ ಮೂಲ ನಿಯಮ ಒಂದು ಉಲ್ಲಂಘನೆಯಾಗಿ ಮನೆಮಂದಿಯೆಲ್ಲಾ ಶಿಕ್ಷೆ ಅನುಭವಿಸುವಂತಾಗಿದೆ. ಬ್ಲೈಂಡ್ಸ್ ಡೌನ್ ಆದಾಗ ಅದರಲ್ಲಿ ಇಣುಕಿ ಯಾರೂ ನೋಡಬಾರದು ಎಂಬುದು ಬಿಗ್ ಬಾಸ್​ನ ಮೂಲ ನಿಯಮ. ಈ ನಿಯಮಗಳನ್ನು ಮುರಿದರೆ ಬಿಗ್ ಬಾಸ್ ಎಂದಿಗೂ ಸಹಿಸೋದಿಲ್ಲ. ಈಗ ದೊಡ್ಮನೆಯಲ್ಲಿ ಈ ಘಟನೆ ನಡೆದು ಹೋಗಿದೆ. ಮಾನಸಾ, ಶಿಶಿರ್ ಹಾಗೂ ಮೋಕ್ಷಿತಾ ಅವರು ಬ್ಲೈಂಡ್ಸ್ ಡೌನ್ ಆದಾಗ ಇಣುಕಿ ನೋಡಿದ್ದರು. ಅದೇ ರೀತಿ ಜಗದೀಶ್ ಅವರು ಬ್ಲೈಂಡ್ಸ್ ಒಳಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡಿದ್ದಾರೆ.

ಬಟ್ಟೆ ಚೇಂಜ್ ಮಾಡುವ ಕಾರಣಕ್ಕೆ ನಾನು ಬ್ಲೈಂಡ್ಸ್ ಒಳಗೆ ಹೋಗಿದ್ದೆ. ನಾನು ಅಲ್ಲಿ ಏನನ್ನೂ ನೋಡಿಲ್ಲ’ ಎಂದು ಜಗದೀಶ್ ಅವರು ಹೇಳಿದರು. ‘ಬೇರೆಯವರಿಗೆ ತೊಂದರೆ ಕೊಡೋದು ಬೇಡ. ನಿಮಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ. ಬೇಕಿದ್ರೆ ಬಿಗ್ ಬಾಸ್​ಗೆ ಹೇಳಿ ಚಾಕು ಬೇಕಿದ್ದರೂ ಹಾಕಿಕೊಳ್ಳಿ’ ಎಂದು ಉಗ್ರಂ ಮಂಜು ಆಕ್ರೋಶ ಹೊರಹಾಕಿದರು.

ಆ ಬಳಿಕ ಮಾತನಾಡಿದ ಹಂಸ, ‘ನಾನು ಎಷ್ಟು ಅಂತ ಹೇಳೋದು? ಕೇಳಿದ್ರೆ ಇಲ್ಲೇ ಪ್ಯಾಂಟ್​ ಬಿಚ್ಚಲಾ, ಚೆಡ್ಡಿ ಬಿಚ್ಚಲಾ’ ಎಂದು ಕೇಳ್ತಾರೆ ಎದು ಅಸಮಾಧಾನ ಹೊರಹಾಕಿದ್ದಾರೆ.


Spread the love

LEAVE A REPLY

Please enter your comment!
Please enter your name here