ಬೆಂಗಳೂರು: ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಮಾತ್ರ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಜಿಲ್ಲಾ, ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಇದು ಬಿಟ್ಟರೆ ರಾಜಕೀಯ ವಿಚಾರ ಆಗಲೀ ಮತ್ಯಾವುದರ ಬಗ್ಗೆಯೂ ಏನೂ ಇಲ್ಲ. ಅಂತಹ ವಿಚಾರದ ಕುರಿತು ಚರ್ಚೆ ಇದ್ದಿದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಮಾತ್ರ ಎಂದು ವಿಜಯೇಂದ್ರ ಹೇಳಿದರು.
ಇನ್ನೂ ಯತ್ನಾಳ್ ಉಚ್ಚಾಟನೆಗೆ ಜಿಲ್ಲಾಧ್ಯಕ್ಷರು ಮನವಿ ಕೊಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮನವಿ ಕೊಡಲು ಇದು ವೇದಿಕೆ ಅಲ್ಲ ಎಂದರು. ಇದು ಪಕ್ಷ ಸಂಘಟನೆ ದೃಷ್ಟಿಯಿಂದ ನಡೆಯುತ್ತಿರುವ ಸಭೆ ಎಂದು ಸ್ಪಷ್ಟನೆ ನೀಡಿದರು.