ಮಕ್ಕಳು ಸಮಾಜದ ಸಂಪತ್ತಾಗಬೇಕು : ಡಿಡಿಪಿಐ ಎಂ.ಎ. ರಡ್ಡೇರ

0
Teacher Motivation Workshop
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಕ್ಷಕ ಸಮಾಜದ ಕಣ್ಣಾಗಿದ್ದು, ಸುಶಿಕ್ಷಿತ, ಸುಸಂಸ್ಕೃತ, ಸ್ವಾಸ್ಥ್ಯ, ಪ್ರಗತಿಶೀಲ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಮಾತ್ರ ಮಹತ್ವದ್ದಾಗಿದೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಶಿಕ್ಷಕರಿಗೆ ಕಿವಿಮಾತು ಹೇಳಿದರು.

Advertisement

ಅವರು ಬುಧವಾರ ಪಟ್ಟಣದ ದೂದಪೀರಾಂ ದರ್ಗಾದ ಸುಲೇಮಾನಿಯಾ ಶಾದಿಹಾಲ್‌ನಲ್ಲಿ ಉಪನಿರ್ದೇಶಕರ ಕಾರ್ಯಾಲಯ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಹಟ್ಟಿ ವತಿಯಿಂದ 2024-25ರ ಶೈಕ್ಷಣಿಕ ಬಲವರ್ಧನೆ ಅಂಗವಾಗಿ ಲಕ್ಷ್ಮೇಶ್ವರ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಎಲ್ಲ ಶಿಕ್ಷಕರಿಗೆ `ಶಾಲೆ, ವಿದ್ಯಾರ್ಥಿ, ಶಿಕ್ಷಕರು ಹಾಗೂ ಸ್ವಾಸ್ಥ್ಯ ಸಮಾಜಕ್ಕೆ ಶಿಕ್ಷಣ ಇಲಾಖೆಯ ಕೊಡುಗೆ’ ಕುರಿತ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಮಕ್ಕಳು ನಲಿಯುತ್ತಾ ಹರ್ಷ-ಉತ್ಸಾಹದಿಂದ ಶಾಲೆಗೆ ಬರುವಂತಾಗಬೇಕು. ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ ಕೊಡಬೇಕು. ಶಾಲೆ ಹೊರ ಜಗತ್ತಿಗೆ ನೋಡಲು ಸುಂದರವಾಗಿ ಕಾಣುವದಕ್ಕಿಂತ ಮಕ್ಕಳಲ್ಲಿನ ಕಲಿಕಾ ಅಗತ್ಯ, ವಾತಾವರಣ ಸೃಷ್ಟಿಸುವ ಕಾರ್ಯ ಶಿಕ್ಷಕರದ್ದಾಗಬೇಕು. ಮಕ್ಕಳ ಮನಸ್ಸನ್ನು ಮೌಲ್ಯಯುತವಾಗಿ ಪರಿವರ್ತಿಸುವ ಶಿಕ್ಷಕರು ನೀವಾಗಬೇಕು. ಸಮಾಜದಲ್ಲಿ ಯಾವುದೇ ಕೆಟ್ಟ ಕಾರ್ಯ ನಡೆದರೂ ಸಹ ಅಲ್ಲಿ ಶಿಕ್ಷಕರನ್ನು ದೂಷಿಸುವಂತಾಗಿದೆ. ಇಂತಹ ಮನೋಭಾವ ಕಡಿಮೆಯಾಗುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸುಲೇಮಾನ ಕಣಕೆ, ಬಿ.ಎಸ್. ಹರ್ಲಾಪೂರ, ಡಿ.ಎಚ್. ಪಾಟೀಲ, ಎಂ.ಬಿ. ಹೊಸಮನಿ, ಆನಂದ ಮುಳಗುಂದ, ಬಿಆರ್‌ಪಿ ಈಶ್ವರ ಮೆಡ್ಲೇರಿ ಸೇರಿ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. ಸಿಆರ್‌ಪಿಗಳಾದ ಸತೀಶ ಬೋಮಲೆ, ಎನ್.ಎ. ಮುಲ್ಲಾ, ಉಮೇಶ ನೇಕಾರ ನಿರ್ವಹಿಸಿದರು.

ಮಕ್ಕಳು ಸಮಾಜದ ಮೌಲ್ಯಯುತ ಸಂಪತ್ತಾಗಬೇಕು. ಅದಕ್ಕಾಗಿ ಪಾಲಕರು, ಸಮುದಾಯವನ್ನು ಒಗ್ಗೂಡಿಸಿಕೊಂಡು ಶಿಕ್ಷಣದ ಸ್ಥಿತಿ-ಗತಿ ಉನ್ನತೀಕರಿಸಬೇಕು. ಶಿಕ್ಷಕರು ಬೋಧನೆಯಲ್ಲಿ ಹೊಸತನ ಅಳವಡಿಸಿಕೊಂಡು ಮಕ್ಕಳ ಕಲಿಕೆಗೆ ಪ್ರೇರಣೆ, ಪ್ರೋತ್ಸಾಹ, ಉತ್ಸಾಹ ತುಂಬಬೇಕು. ಸರ್ಕಾರಿ ಶಾಲೆಗಳಲ್ಲಿಯೂ ಎಲ್ಲ ರೀತಿಯ ಸೌಲಭ್ಯಗಳಿದ್ದು, ಶಿಕ್ಷಣ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಅಗತ್ಯ ಕ್ರಮ ಕೈಗೊಳ್ಳಬೇಕು.
– ಎಂ.ಎ. ರಡ್ಡೇರ.
ಉಪನಿರ್ದೇಶಕರು, ಸಾ.ಶಿ ಇಲಾಖೆ.


Spread the love

LEAVE A REPLY

Please enter your comment!
Please enter your name here