ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಯುಎಐ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅತೀ ವೇಗದಲ್ಲಿ 9 ವಿಕೆಟ್ ಭರ್ಜರಿ ಗೆಲುವು ಕಂಡಿದೆ.
ಯುಎಇ ನೀಡಿದ 58 ರನ್‌ಗಳ ಗುರಿಯನ್ನು ಭಾರತ ಕೇವಲ 4.3 ಓವರ್‌ಗಳಲ್ಲಿ ಚೇಸ್ ಮಾಡಿ, T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಅತ್ಯಂತ ವೇಗದ ಚೇಸ್ ದಾಖಲೆಯನ್ನು ಬರೆಯಿತು. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ (2 ಬೌಂಡರಿ ಮತ್ತು 3 ಸಿಕ್ಸರ್) ಬಾರಿಸಿ ತಂಡಕ್ಕೆ ವೇಗದ ಆರಂಭ ನೀಡಿದರು. ಶರ್ಮಾ ಗೆಳೆಯ, ಓಪನಿಂಗ್ ಪಾರ್ಟ್ನರ್ ಶುಭ್ಮನ್ ಗಿಲ್ 20 ರನ್ (ಅಜೇಯ) ಮತ್ತು ನಾಯಕ ಸೂರ್ಯಕುಮಾರ್ ಯಾದವ್ 7 ರನ್ (ಅಜೇಯ) ಗಳಿಸಿ ಗುರಿಯನ್ನು ಸುಲಭವಾಗಿ ತಲುಪಿದರು. ಭಾರತ 4.3 ಓವರ್‌ಗಳಲ್ಲಿ 60/1 ಸ್ಕೋರ್ ಮಾಡಿ ಗೆಲುವಿನ ರೇಖೆಯನ್ನು ದಾಟಿತು.
ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಭಾರತದ ಕೋಚ್ ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ರೂಪಿಸಿದ ಬೌಲಿಂಗ್ ಯೋಜನೆಯನ್ನು ತಂಡದ ಬೌಲರ್‌ಗಳು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತಂದರು. ಸ್ಪಿನ್ ಗೆ ನೆರವು ನೀಡುವ ದುಬೈನ ಪಿಚ್ ಅನ್ನ ಭಾರತದ ಸ್ಪಿನ್ ಬೌಲರ್‌ಗಳು ಉತ್ತಮವಾಗಿ ಬಳಸಿಕೊಂಡರು.
ಕುಲದೀಪ್ ಯಾದವ್, ಇಂಗ್ಲೆಂಡ್‌ನಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಬೆಂಚ್‌ನಲ್ಲಿ ಕುಳಿತು ನಿರಾಸೆ ಅನುಭವಿಸಿದ್ದವರು, ಈ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. 2.1 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಪಡೆದು 7 ರನ್ ನೀಡಿದರು, ಇದು T20 ಏಷ್ಯಾ ಕಪ್‌ನ ಎರಡನೇ ಅತ್ಯುತ್ತಮ ಬೌಲಿಂಗ್ ದಾಖಲೆಯಾಯಿತು. ಯುಎಇ ತಂಡ 13.1 ಓವರ್‌ರಗಳಲ್ಲಿ 57 ರನ್‌ಗೆ ಆಲೌಟ್ ಆಯಿತು. ಈ ಚೇಸ್‌ನೊಂದಿಗೆ ಭಾರತ ತನ್ನ ಹಿಂದಿನ T20ಐ ಚೇಸ್ ದಾಖಲೆಯನ್ನು ಮುರಿಯಿತು.