ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ಥಗೊಂಡಿದೆ. ನದಿಗಳು ಉಕ್ಕಿ ಹರಿದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಇದೀಗ ತನ್ನೂರಿನ ಜನರ ಸಂಕಷ್ಟಕ್ಕೆ ಜ್ಯೂ.ಎನ್‌ಟಿಆರ್ ನೆರವಾಗಿದ್ದಾರೆ. ಸಿಎಂ ಫಂಡ್‌ಗೆ ಒಂದು ಕೋಟಿ ರೂ. ದಾನ ಮಾಡಿ ನಟ ಮಾನವೀಯತೆ ಮೆರೆದಿದ್ದಾರೆ.
ಭಯಂಕರ ಮಳೆಗೆ ತತ್ತರಿಸಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡು ಕಡೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಒಟ್ಟು ಒಂದು ಕೋಟಿ ರೂ. ದೇಣಿಗೆ ನೀಡುವ ಮೂಲಕ ಕಷ್ಟದಲ್ಲಿರುವ ಜನರ ನೆರವಿಗೆ ತಾರಕ್ ರಾಮ್ ಕೈಜೋಡಿಸಿದ್ದಾರೆ.
ಅಂದಹಾಗೆ, ಉಡುಪಿ ಜಿಲ್ಲೆಯಲ್ಲಿ ಜ್ಯೂ.ಎನ್‌ಟಿಆರ್, ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಬಳಿಕ ಅಮ್ಮನ ಆಸೆ ತೀರಿಸಲು ಸೆ.2ರಂದು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದರು.