HomeAgricultureಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ

ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ತಾಲೂಕಿನ ಕಲಕೇರಿ ಗ್ರಾಮದ ಎಣ್ಣೆ ಸಂಸ್ಕರಣಾ ಸಹಕಾರ ಸಂಘ ಕಲಕೇರಿ ವತಿಯಿಂದ ಕೇಂದ್ರ ಸರಕಾರವು ಬೆಂಬಲ ಬೆಲೆಯ ಎಫ್‌ಎಕ್ಯೂ ಅಡಿ ಸೂರ್ಯಕಾಂತಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜಾಭಕ್ಷಿ ಹರ್ಲಾಪೂರ ಹೇಳಿದ್ದಾರೆ.

ಸೂರ್ಯಕಾಂತಿ ಬೆಳೆದ ರೈತರು ಆಧಾರ್ ಸಂಖ್ಯೆ, ಉತಾರ (ಪಹಣಿ) ಖಾತೆದಾರರ ಬ್ಯಾಂಕ್ ಪಾಸ್‌ಬುಕ್, ಬಯೋಮೆಟ್ರಿಕ್ ಕಡ್ಡಾಯವಾಗಿ ನೀಡಬೇಕಾಗಿದ್ದು, ಪ್ರತಿ ಎಕರೆಗೆ 3 ಕ್ವಿಂಟಾಲ್ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.

ಮಾಹಿತಿಗಾಗಿ ಆರ್.ಐ. ಹರ್ಲಾಪೂರ-9591336568, ನನ್ನೆ ಸಾಬ ಖತೀಬ್-9482777636, ಬಸುರಾಜ ಯಲಿಗಾರ-8747474026 ಇವರನ್ನು ಸಂಪರ್ಕಿಸಬಹುದಾಗಿದೆ. ಟಿಎಎಪಿಎಂಎಸ್ ಮುಂಡರಗಿಯ ಹಳೆ ಎಪಿಎಂಸಿ ಯಾರ್ಡ್ನಲ್ಲಿ ನೋಂದಾಯಿಸಿಕೊಂಡು ರೈತರು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img