ಬೀದರ್:- ಭೀಕರ ರಸ್ತೆ ಅಪಘಾತವಾಗಿ ಸ್ಥಳದಲ್ಲೇ ವೈದ್ಯ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮುಸ್ತಾಪೂರ್ ಟೋಲ್ ಗೇಟ್ ಬಳಿ ನಡೆದಿದೆ. ಟೆಂಪೋ ಟ್ರಾವೆಲ್ಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
Advertisement
50 ವರ್ಷದ ಡಾ. ನೀಲಕಂಠ ಬೋಸ್ಲೆ ಸಾವನ್ನಪ್ಪಿದ ವೈದ್ಯ. ಬೀದರ್ ಕಡೆಯಿಂದ ಸಂತಪೂರ್‌ಗೆ ಹೋಗುತ್ತಿದ್ದ ವೇಳೆ ಟೆಂಪೋ ಟ್ರಾವೆಲ್ಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವೈದ್ಯ 10 ರಿಂದ 15 ಅಡಿ ದೂರ ಹಾರಿ ಬಿದ್ದಿದ್ದಾರೆ. ಭೀಕರ ರಸ್ತೆ ಅಪಘಾತಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೈದ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಔರಾದ್‌ನ ಸಂತಪುರ ಗ್ರಾಮದ ನಿವಾಸಿಯಾಗಿರುವ ವೈದ್ಯ ನೀಲಕಂಠ ಬೀದರ್‌ನಿಂದ ಸಂತಪುರ ಗ್ರಾಮದಲ್ಲಿರುವ ತನ್ನ ಕ್ಲಿನಿಕ್‌ಗೆ ಹೋಗುತ್ತಿದ್ದಾಗ ಅಫಘಾತವಾಗಿದೆ. ಸಿನಿಮೀಯಾ ರೀತಿಯಲ್ಲಿ ಭೀಕರ ರಸ್ತೆ ಅಪಘಾತದ ಭಯಾನಕ ದೃಶ್ಯಗಳು ಸಿಸಿಸಿಟಿಯಲ್ಲಿ ಸೆರೆಯಾಗಿದೆ