ವಿಜಯಸಾಕ್ಷಿ ಸುದ್ದಿ, ಗದಗ: ಪ್ರೀತಿ, ವಿಶ್ವಾಸ ಹಾಗೂ ಅಕ್ಕ–ತಮ್ಮನ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಹಬ್ಬವನ್ನು ಗದಗದ ಹುಯಿಲಗೋಳ ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ ಹುಯಿಲಗೋಳ ಹಾಗೂ ಡಾ. ರೂಪಾ ಹುಯಿಲಗೋಳ ಅವರ ಸುಪುತ್ರ ಸಕ್ಷಮ್ ಮತ್ತು ರಾಧಾ ಕಡ್ಲಿಮಟ್ಟಿ ಅವರು ವಿಶೇಷವಾಗಿ ಆಚರಿಸಿದರು.
ರಾಧಾ ಕಡ್ಲಿಮಟ್ಟಿ ಅವರು ಸಕ್ಷಮ್‌ಗೆ ರಾಖಿ ಕಟ್ಟಿ, ಸಿಹಿ ಹಂಚುವ ಮೂಲಕ ರಕ್ಷಾ ಬಂಧನದ ಸಂಭ್ರಮವನ್ನು ಆಚರಿಸಿದರು. ಕಳೆದ 11 ವರ್ಷಗಳಿಂದ ಪ್ರೀತಿಯ ಅಕ್ಕ–ತಮ್ಮನಂತೆ ಬಾಂಧವ್ಯ ಹೊಂದಿರುವ ರಾಧಾ ಮತ್ತು ಸಕ್ಷಮ್ ಅವರು ಪ್ರತಿವರ್ಷವೂ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ರಕ್ತಸಂಬಂಧಕ್ಕಿಂತಲೂ ಮಿಗಿಲಾದ ಪ್ರೀತಿ, ವಿಶ್ವಾಸ ಹಾಗೂ ಆತ್ಮೀಯತೆಯ ಬಂಧಕ್ಕೆ ಈ ರಕ್ಷಾ ಬಂಧನ ಸಾಕ್ಷಿಯಾಗಿದ್ದು, ಅವರ 11 ವರ್ಷಗಳ ಅಕ್ಕ–ತಮ್ಮನ ಬಾಂಧವ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.



