HomeIndia Newsಅಂಗವಿಕಲರ ನೆರವಿಗೆ ನಿಂತ ಕೇಂದ್ರ.. ವಸತಿ ಹಂಚಿಕೆಯಲ್ಲಿ ಶೇ. 4% ಮೀಸಲಾತಿ!

ಅಂಗವಿಕಲರ ನೆರವಿಗೆ ನಿಂತ ಕೇಂದ್ರ.. ವಸತಿ ಹಂಚಿಕೆಯಲ್ಲಿ ಶೇ. 4% ಮೀಸಲಾತಿ!

For Dai;y Updates Join Our whatsapp Group

Spread the love

ನವದೆಹಲಿ:- ಕೇಂದ್ರ ಸರ್ಕಾರವು ಅಂಗವಿಕಲರ ನೆರವಿಗೆ ನಿಂತಿದ್ದು, ವಸತಿ ಹಂಚಿಕೆಯಲ್ಲಿ ಶೇ. 4% ಮೀಸಲಾತಿ ಕಡ್ಡಾಯ ಎಂದು ಘೋಷಿಸಿದೆ.

ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಇಂದು ಈ ವಿಷಯ ಪ್ರಕಟಿಸಿದ್ದಾರೆ. ಇನ್ಮುಂದೆ ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ ಶೇ.4 ರಷ್ಟು ಮೀಸಲಾತಿ ನೀಡಲಾಗುವುದು, ಇದು ಸಾರ್ವಜನಿಕ ಸೇವೆಗಳಲ್ಲಿ ಸಮಾನತೆ, ಘನತೆ ಮತ್ತು ಪ್ರವೇಶದತ್ತ ಗಣನೀಯ ಹೆಜ್ಜೆಯಾಗಿದೆ ಎಂದು ಖಟ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋದಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಉದ್ದೇಶಕ್ಕೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಪ್ರವೇಶ ಭಾರತ ಅಭಿಯಾನದಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!