HomeGadag Newsಕರುನಾಡಿಗಾಗಿ ತೋಂಟದ ಶ್ರೀಗಳ ಕೊಡುಗೆ ಅಪಾರ

ಕರುನಾಡಿಗಾಗಿ ತೋಂಟದ ಶ್ರೀಗಳ ಕೊಡುಗೆ ಅಪಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೈಂಕರ್ಯಕ್ಕೆ ಮುನ್ನಡಿ ಇಟ್ಟರು. ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಪುಸ್ತಕ ಪ್ರಕಟನೆಯನ್ನು ಪ್ರಾರಂಭಿಸಿ ಮರೆತು ಹೋಗಬಹುದಾದ ಮಹನೀಯರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಿ ಸಾಹಿತ್ಯ ಸಂವರ್ಧನೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಶಿವಾನುಭವ ವೇದಿಕೆ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವನ್ನು ಪೂಜೆಯ ರೂಪದಲ್ಲಿ ನೇರವೇರಿಸಿದ್ದಾರೆ. ಅವರು ಕನ್ನಡಕ್ಕಾಗಿ ಬದುಕಿದವರು ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ತೋಂಟದ ಸಿದ್ಧಲಿಂಗಶ್ರೀಗಳ ಹಾಗೂ ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಡಾ. ತೋಂಟದ ಸಿದ್ಧಲಿಂಗಶ್ರಿಗಳ ಕೊಡುಗೆ ಕುರಿತಾಗಿ ಮಾತನಾಡಿದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮೀಜಿ, ಕನ್ನಡ ಜಗದ್ಗುರು ಎಂದು ಜಗದ ಜನ ವ್ಯಾಖ್ಯಾನಿಸಿದ್ದಾರೆಂದು ತಿಳಿಸಿದರು.

ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಸದಾನಂದ ಪಿಳ್ಳಿ ಅವರು ಜನಸೇವೆಗೆ ಅರ್ಪಿಸಿಕೊಂಡ ಅಪರೂಪದ ರಾಜಕಾರಣಿಯಾಗಿದ್ದರು. ನಗರಸಭೆಯ ವಿರೋಧ ಪಕ್ಷದ ನಾಯಕರಾಗಿ ಸಮಸ್ಯೆಗಳಿಗೆ ಸ್ಪಂದಿಸಿ ನಗರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸಮಾಜಮುಖಿ, ಜನಪರ ಕಾಳಜಿಯ ಸದಾನಂದ ಅವರು ತಮ್ಮ ಸೇವೆಯ ಮೂಲಕ ಅಜರಾಮರರಾಗಿದ್ದಾರೆಂದು ತಿಳಿಸಿದರು.

ಶಿಕ್ಷಣ ಸಂವರ್ಧನೆಗೆ ನೀಡಿದ ಕೊಡುಗೆಯನ್ನು ಅನುಲಕ್ಷಿಸಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಇವರನ್ನು ಇದೇ ಸಂದರ್ಭದಲ್ಲಿ ಪರಿಷತ್ತಿನಿಂದ ಸನ್ಮಾನಿಸಲಾಯಿತು. ವೇದಿಕೆ ಮೇಲೆ ದತ್ತಿದಾನಿಗಳಾದ ಸುರೇಖಾ ಸದಾನಂದ ಪಿಳ್ಳಿ, ಬಸವರಾಜ ಪಿಳ್ಳಿಉಪಸ್ಥಿತರಿದ್ದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ. ಅನಂತ ಶಿವಪುರ, ಸಿ.ಕೆ.ಎಚ್. ಶಾಸ್ತಿç(ಕಡಣಿ), ಡಾ. ಶಿವಪ್ಪ ಕುರಿ, ಜೆ.ಎ. ಪಾಟೀಲ, ಡಾ. ಧನೇಶ ದೇಸಾಯಿ, ಅ.ದ. ಕಟ್ಟೀಮನಿ, ಅಂದಾನೆಪ್ಪ ವಿಭೂತಿ, ಪ್ರ.ತೋ. ನಾರಾಯಣಪುರ, ಯಲ್ಲಪ್ಪ ಹಂದ್ರಾಳ, ಬಿ.ಎಸ್. ಹಿಂಡಿ, ಮಂಜುಳಾ ವೆಂಕಟೇಶಯ್ಯ, ಡಾ. ರಶ್ಮಿ ಅಂಗಡಿ, ಎಸ್.ಎಸ್. ಪಿಳ್ಳೆ, ಪಾರ್ವತಿ ಬೇವಿನಮರದ, ರತ್ನಾ ಪುರಂತರ ಷಡಕ್ಷರಿ ಮೆಣಸಿನಕಾಯಿ, ಸತೀಶಕುಮಾರ ಚನ್ನಪ್ಪಗೌಡರ, ಅಮರೇಶ ರಾಂಪುರ, ಗುರುಪಾದ ಕಟ್ಟಿಮನಿ, ಬಸವರಾಜ ಗಣಪ್ಪನವರ, ಎಸ್.ಪಿ. ಹೊಂಬಳ, ಸಹನಾ ಪಿಳ್ಳಿ, ಭಾಗ್ಯಶ್ರೀ ಹುರಕಡ್ಲಿ, ಶಾಂತಾ ಗಣಪ್ಪನವರ, ಕಲಾವತಿ ಪಿಳ್ಳೆ, ಶೈಲಶ್ರೀ ಕಪ್ಪರದ, ಸುಪ್ರಿಯಾ ಅಂಗಡಿ, ಎಸ್.ಎಸ್. ಪಿಳ್ಳೆ, ಕೆ.ಎಸ್. ಗುಗ್ಗರಿ, ದಿಲೀಪಕುಮಾರ ಗುಗ್ಗರಿ, ಮಹಾಂತ ಕಟ್ಟಿಮನಿ, ಸುನಂದಾ ಪಿಳ್ಳಿ, ಉಮಾ ಕಣವಿ, ಅಕ್ಕಮ್ಮ ಪಾರ್ವತಿಮಠ, ಬಿ.ಬಿ. ಹೊಳಗುಂದಿ, ಅನಂತಮೋಹನ ಭಟ್, ಶಾರದಾ ಹಚಡದ, ವಿಜಯಲಕ್ಷ್ಮೀ ಕಾತರಕಿ, ಬಸವರಾಜ ತೋಟಗೇರ, ಶ್ರೀಧರ ದೇಶಪಾಂಡೆ, ಈಶ್ವರಪ್ಪ ಕುಬುಸದ, ಜಗನ್ನಾಥ ಟಿಕಾಂದಾರ, ಕೊಟ್ರೇಶ ಮೆಣಸಿನಕಾಯಿ, ಜಯಬಸವ ಮೆಣಸಿನಕಾಯಿ, ಶೋಭಾ ಬೆಂಗಳೂರ, ಗುರುದೇವಿ ಪಟ್ಟಣಶೆಟ್ಟಿ, ಸಾಕ್ಷಿ ಕುರ್ಲಿ, ಶಿವಕುಮಾರ ಬೇವಿನಮರದ, ಗಂಗಪ್ಪ ಮುದಗಲ್ಲ, ಮಧು ಕುರ್ಲಿ, ಕೆ.ಎಸ್. ಜಯದೇವ ಭಟ್, ಮೋಹನ ಕೋರಿ, ಎಸ್.ಪಿ. ಗೌಳಿ, ಎಸ್.ಎಸ್. ಯಾನಮಶೆಟ್ಟಿ, ಎಂ.ಎಫ್. ಡೋಣಿ, ಶಂಭು ಕಾತರಕಿ, ಜನೇಶ ಚನ್ನಪ್ಪಗೌಡರ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪೂಜ್ಯರು ಸೂಕ್ಷ್ಮಮತಿಗಳಾಗಿದ್ದು, ಸಮಾಜಕ್ಕೆ ಒದಗಬಹುದಾದ ಆಪತ್ತುಗಳನ್ನು ಮುಂಚಿತವಾಗಿಯೇ ಗ್ರಹಿಸಿ ಅವುಗಳಿಗೆ ಈಗಿನಿಂದಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಪ್ರತಿ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಂದ ಭಕ್ತರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಓದುವ ಸಂಸೃತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಿದರು. ಭಕ್ತರು ನೀಡಿದ ಹಣವನ್ನು ಪುಸ್ತಕ ಪ್ರಕಟನೆಗೆ ಬಳಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಮಾಡಿದರೆಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!