ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿಸ್ಥರನ್ನ ನೇಣಿಗೆ ಹಾಕಬೇಕು: ಜಿಟಿ ದೇವೇಗೌಡ

0
Spread the love

ಮೈಸೂರು:- ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿಸ್ಥರನ್ನ ನೇಣಿಗೆ ಹಾಕಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ತಪ್ಪಿಸ್ಥರನ್ನ ನೇಣಿಗೆ ಹಾಕಬೇಕು. ಯಾರಿಂದಲೂ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗೆಡೆ ಅವರಿಗೆ ಕೆಟ್ಟ ಹೆಸರು ತರಲು ಸಾಧ್ಯವಿಲ್ಲ. ಅವರನ್ನ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಇದು ಎಲ್ಲಾ ಕನ್ನಡಿಗರಿಗೆ ನೋವಾಗಿದೆ. ಅವರಿಗೆ ಇಡೀ ಪ್ರಪಂಚದಾದ್ಯಂತ ಭಕ್ತರಿದ್ದಾರೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಷಡ್ಯಂತ್ರ ಮಾಡಿದವರನ್ನು ಪತ್ತೆ ಹಚ್ಚಬೇಕು. ತನಿಖಾ ವರದಿ ಆದಷ್ಟು ಹೊರಬರಲಿ. ದಿನ ಒಬ್ಬೊಬ್ಬರು ಧರ್ಮಸ್ಥಳ ಉಳಿಸುತ್ತೇನೆಂದು ಹೋರಾಟ ಮಾಡುವುದರಲ್ಲಿ ಅರ್ಥ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವಿಚಾರವಾಗಿ ಮಾತನಾಡಿ, ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ಸಿಎಂ ಕೊಟ್ಟಿದ್ದೆವು. ಅದು ಅವರ ಪರಮ ಅಧಿಕಾರ. ಸಿಎಂ ತಮ್ಮ ಅಧಿಕಾರ ಬಳಸಿ ಆಯ್ಕೆ ಮಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ. ಸಾಹಿತಿ ಬಾನು ಮುಷ್ತಾಕ್ ಅವರಿಗೆ ಚಾಮುಂಡಿ ತಾಯಿಯ ಮೇಲೆ ನಂಬಿಕೆ ಇದ್ದರೆ ಉದ್ಘಾಟನೆಗೆ ಬರುತ್ತಾರೆ. ನಂಬಿಕೆ ಇಲ್ಲದಿದ್ದರೆ ಬರಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here