ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಗ್ರಾಮದೇವಿ ದೇವಸ್ಥಾನ ಸೇರಿದಂತೆ ದ್ಯಾಮವ್ವ, ದುರ್ಗಮ್ಮ, ಮಾಸದೇವಿ, ರೇಣುಕಾ ಯಲ್ಲಮ್ಮ, ಬನಶಂಕರಿದೇವಿ, ದೇವಸ್ಥಾನಕ್ಕೆ ಕಂದಾಯ ಇಲಾಖೆ, ಪಟ್ಟಣ ಪಂಚಾಯತಿ, ಮುಳಗುಂದ ರೈತ ಸಂಘ ಹಾಗೂ ಹಿರಿಯರು, ಮುತ್ತೈದೆಯರು ಸೇರಿ ಶುಕ್ರವಾರ ದೇವಿಗೆ ಉಡಿತುಂಬಿ ಮಳೆ-ಬೆಳೆಗಾಗಿ ಪ್ರಾರ್ಥಿಸಿದರು.
ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಭೂಮಿಗೆ ಬೀಜ ಬಿತ್ತುವ ಮೊದಲು ಗ್ರಾಮದ ದೇವತೆಗೆ ಉಡಿತುಂಬುವುದು ಪದ್ಧತಿಯಾಗಿದೆ. ರೈತ ಸಮೂಹ ಐದು ವಾರಗಳನ್ನು ಮಾಡಿ ನಂತರ ಎಲ್ಲಾ ದೇವಸ್ಥಾನಕ್ಕೆ ತೆರಳಿ ಉಡಿ ತುಂಬಿ ಬೀಜ ಬಿತ್ತನೆ ಮಾಡುವುದರಿಂದ ಮಳೆ-ಬೆಳೆ, ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಈ ಸಂದರ್ಭದಲ್ಲಿ ಚಂದ್ರು ಬಟ್ಟೂರ, ಬಸವರಾಜ ಸುಂಕಾಪೂರ, ಚನ್ನಯ್ಯ ಹಿರೇಮಠ, ಮೋಹನ ಮದ್ದಿನ, ದೇವರಾಜ ಸಂಗನಪೇಟಿ, ದತ್ತಣ್ಣ ಎಳವತ್ತಿ, ಮುತ್ತಪ್ಪ ಬಳ್ಳಾರಿ, ಜಿ.ಎಂ. ಗಾಡಿ, ಶಂಕ್ರಯ್ಯ ಹಿರೇಮಠ, ಮಹ್ಮದಲಿ ಶೇಖ, ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ ಮುಂತಾದವರಿದ್ದರು.