ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ದೇವರಾಜು ಅರಸುರವರು ಶೋಷಿತ ಸಮಾಜದ ಶಕ್ತಿಯಾಗಿದ್ದರು. ಅಮಾನವೀಯ ಮೌಢ್ಯತೆಗಳನ್ನು ತೊರೆದು ದಮನಿತ ವರ್ಗಕ್ಕೆ ದಾರಿದೀಪವಾಗಿದ್ದರು ಎಂದು ತಹಸೀಲ್ದಾರ ಬಿ.ವಿ. ಗಿರೀಶಬಾಬು ಹೇಳಿದರು.
ಅವರು ಪಟ್ಟಣದ ದೇವರಾಜ ಅರಸು ಭವನದಲ್ಲಿ ಹಿಂದುಳಿದ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂ ಸುದಾರಣೆ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿದ್ದಾರೆ. ಅರಸು ಹಾಕಿಕೊಟ್ಟ ದಾರಿಯಲ್ಲಿ ನಾವು ನೀವೆಲ್ಲ ಸಾಗೋಣ ಎಂದು ನುಡಿದರು.
ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಕೆ. ಭೀಮಪ್ಪ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮಾಜಿ ಸಿಎಂ ದೇವರಾಜ ಅರಸು ಅವರು 1977ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆ ಮಾಡಿದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಇಂದಿನ ರಾಜಕಾರಣಿಗಳು ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಮರೆತು ಕೇವಲ ದುಡ್ಡಿನ ಆಸೆಗಾಗಿ ರಾಜಕಾರಣ ಮಾಡುವವರು ಹೆಚ್ಚಿದ್ದಾರೆ. ಆದರೆ ದೇವರಾಜ ಅರಸುರವವರು ಇದಕ್ಕೆ ಅಪವಾದವಾಗಿದ್ದು, ಅಂತ್ಯಕಾಲದಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು ಎಂದರು.
ನ್ಯಾಯವಾದಿ ಕಣವಿಹಳ್ಳಿ ಬಿ.ಮಂಜುನಾಥ ಉಪನ್ಯಾಸ ನೀಡಿದರು. ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬೀ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್, ಲಾಟಿದಾದಾಪೀರ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್ ಸಾಹೇಬ್, ಟಿ.ವೆಂಕಟೇಶ, ಹೇಮಣ್ಣ ಮೋರಗೇರಿ, ಮುಖಂಡರಾದ ನಿಚ್ಚವನಹಳ್ಳಿ ಭೀಮಪ್ಪ, ಅರಸೀಕೆರೆ ಷಣುಖಪ್ಪ, ಗುಡಿಹಳ್ಳಿ ಹಾಲೇಶ, ಕಬ್ಬಳ್ಳಿ ಮೈಲಪ್ಪ, ಗೋಂದಳಿ ದುರುಗಪ್ಪ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಹರೀಶ್ ನಾಯ್ಕ, ನಿಲಯ ಮೇಲ್ವಿಚಾರಕ ಬಿ.ಎಚ್. ಚಂದ್ರಪ್ಪ, ವೀರಣ್ಣ ಮತ್ತಿಹಳ್ಳಿ, ಸುನೀಲ್ ಕುಮಾರ್, ಜುಂಜಪ್ಪ, ಪ್ರೇಮಾವತಿ, ನಿರ್ಮಲ, ಭಾಗ್ಯಾವತಿ, ಅನ್ನಪೂರ್ಣ ಮುಂತಾದವರಿದ್ದರು.