ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಡಾ. ಚಂದ್ರು ಲಮಾಣಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತಕ್ಷೇತ್ರ ವ್ಯಾಪ್ತಿಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿಯ ರಸ್ತೆಗಳು ಹಾಳಾಗಿದ್ದು, ಇವುಗಳ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಸೋಮವಾರ ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ಮೆಂಟ್ ಲಿಮಿಟೆಡ್ ವತಿಯಿಂದ 50 ಲಕ್ಷ ರೂ ವೆಚ್ಚದಲ್ಲಿ ಗೋವನಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ತಾರೀಕೊಪ್ಪ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಸತತ ಮಳೆಯಿಂದ ಹಾಗೂ ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಕುರಿತು ಸಂಬAಧಿಸಿದ ಇಲಾಖೆಯ ಮೇಲಾಧಿಕಾರಿಗಳ ಮತ್ತು ಸರಕಾರದ ಗಮನಕ್ಕೆ ತರಲಾಗಿತ್ತು. ಇದೀಗ ಹಂತ ಹಂತವಾಗಿ ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆಯಾಗುತ್ತಿದ್ದು, ಹಾಳಾದ ರಸ್ತೆಗಳ ಸುಧಾರಣೆ ನಡೆಯುತ್ತಿದೆ. ಇಂತಹ ಅಭಿವೃದ್ಧಿ ಕೆಲಸಗಳಿಗೆ ಸ್ಥಳೀಯ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗುರಪ್ಪ ಕಬ್ಬೇರಳ್ಳಿ, ಹನುಮಂತ ಕಬ್ಬೇರಳ್ಳಿ, ಅಪ್ಪಣ್ಣ ಸಾಲಿ, ಅಜ್ಜಪ್ಪ ಭಜಂತ್ರಿ, ಶಂಕರ ಭಾವಿ, ರಾಜೀವ್‌ರೆಡ್ಡಿ ಬಮ್ಮನಕಟ್ಟಿ, ಪ್ರವೀಣಗೌಡ ಪಾಟೀಲ, ಭೀಮಣ್ಣ ಇಮ್ಮಡಿ, ಫಕ್ಕೀರೇಶ ತಳ್ಳಳ್ಳಿ, ಭೀಮನಗೌಡ ಪಾಟೀಲ, ಸುರೇಶ ತಳ್ಳಳ್ಳಿ, ರವಿ ದುನ್ನೂರು, ವಿಜಯಾನಂದ ಪಾಟೀಲ, ರಾಘು ಗೋಡ್ಕೊಟ್ಟಿ, ಕುಮಾರ ಕಬ್ಬೇರಳ್ಳಿ, ಪ್ರೇಮಕುಮಾರ ಮೇಲಿನಮನಿ, ಸುರೇಶಗೌಡ ಪಾಟೀಲ, ಹನುಮರಡ್ಡಿ ಬುಳ್ಳಪ್ಪನವರ, ಶಂಕ್ರಪ್ಪ ನೀರಲಗಿ, ಈರಣ್ಣ ಮಾಗಳದ, ಗುಡದಯ್ಯ ಸೂರಣಗಿ, ಭೀಮಪ್ಪ ಲಮಾಣಿ, ಪೂರಪ್ಪ ಲಮಾಣಿ, ಪ್ರಶಾಂತ ಕರೆಯತ್ತಿನ ಮುಂತಾದವರು ಉಪಸ್ಥಿತರಿದ್ದರು.

 

**ಬಾಕ್ಸ್**

ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ-ಲಕ್ಮೇಶ್ವರ-ಮುಂಡರಗಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅವಶ್ಯಕವಿರುವ ಸಮರ್ಪಕ ರಸ್ತೆ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ವಿವಿಧ ಸೌಲಭ್ಯಗಳು ತ್ವರಿತಗತಿಯಲ್ಲಿ ಸಿಗುವುದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here