ವಿಜಯಪುರ:- ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರು ಪಾಲಾಗಿರುವ ಘಟನೆ ಜರುಗಿದೆ. 47 ವರ್ಷದ ತುಕಪ್ಪ ಗೌಡರ ಮೃತ ವ್ಯಕ್ತಿ.
Advertisement
ಮೊದಲೇ ಬೇಸಿಗೆಯ ಬಿಸಿಲಿನ ಬೇಗೆ ಹೆಚ್ಚಾಗಿದೆ. ಹೀಗಾಗಿಯೇ ಇಬ್ಬರು ಕೆರೆಯಲ್ಲಿ ಈಜಲು ಹೋಗಿದ್ದಾರೆ. ಇದರಲ್ಲಿ ಓರ್ವ ನೀರು ಪಾಲಾಗಿದ್ದರೆ, ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದು, ಮೃತದೇಹಕ್ಕಾಗಿ ಶೋಧ ನಡೆದಿದೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.