ಮಲೆನಾಡಿನ ರಾಜ್ಯ ಮಟ್ಟದ ಕೃಷಿ‌ ಮೇಳದಲ್ಲಿ ‘ಶಾಖಾಹಾರಿ’ ಹಾಡು ಬಿಡುಗಡೆ…

0
Spread the love

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಶಾಖಾಹಾರಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಮಲೆನಾಡಿನ ಸೊಗಡಿನ ಥ್ರಿಲ್ಲರ್ ಕಥೆ ಹೂರಣದ ಈ ಹಾಡನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ರಿಲೀಸ್ ಮಾಡಲಾಗಿದೆ. ಇಡೀ ಚಿತ್ರತಂಡ ಈ ವೇಳೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

Advertisement

ಸೌಗಂಧಿಕ ಎಂಬ  ಮೆಲೋಡಿ ಹಾಡಿಗೆ ನಿರ್ದೇಶಕ‌ ಸಂದೀಪ್ ಸುಕಂದ್ ಸಾಹಿತ್ಯ ಬರೆದಿದ್ದು, ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಮಯೂರ್‌ ಅಂಬೆಕಲ್ಲು ಸಂಗೀತದ ಇಂಪು ಹಾಡಿನ ತೂಕ ಹೆಚ್ಚಿಸಿದೆ. ಯುವ ಪ್ರೇಮಿಗಳ ನಡುವಿನ ಈ ಮೆಲೋಡಿ ಹಾಡಿನಲ್ಲಿ ವಿನಯ್ ಯುಜೆ ಹಾಗೂ ನಿಧಿ ಹೆಗಡೆ ಕಾಣಿಸಿಕೊಂಡಿದ್ದಾರೆ.

ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವವಿರುವ ಸಂದೀಪ್ ಸುಂಕದ್ ಶಾಖಾಹಾರಿ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಬಾಣಸಿಗನ ಪಾತ್ರದಲ್ಲಿ ರಂಗಾಯಣ ರಘು, ಪೊಲೀಸ್‌ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗಡೆ ತಾರಾಬಳಗದಲ್ಲಿದ್ದಾರೆ.

ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ‘ಶಾಖಾಹಾರಿ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಂದೀಪ್‌ಗೆ ಜೊತೆಯಾಗಿ ವಿಶ್ವಜಿತ್ ರಾವ್ ಕ್ಯಾಮರಾ, ಶಶಾಂಕ್ ನಾರಾಯಣ ಎಡಿಟಿಂಗ್, ಮಯೂರ್ ಅಂಬೆಕಲ್ಲು ಸಂಗೀತ ಈ ಸಿನಿಮಾಗಿದೆ.  ಇಡೀ ಚಿತ್ರವನ್ನು ಮಲೆನಾಡಿನಲ್ಲೇ ಚಿತ್ರೀಕರಣ ಮಾಡಿದ್ದು, ಇಲ್ಲಿನವರೇ ಈ ಸಿನಿಮಾಗೆ ಕೆಲಸ ಮಾಡಿರೋದು ವಿಶೇಷ. ಈಗಾಗಲೇ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತಂಡ ಬ್ಯುಸಿಯಾಗಿರುವ ಚಿತ್ರತಂಡ, ಫೆಬ್ರವರಿ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಈ ಸಿನೆಮಾವನ್ನು ಕೆ ಆರ್ ಜಿ ಸ್ಟುಡಿಯೊಸ್ ವಿತರಣೆ ಮಾಡಲಿದ್ದಾರೆ.


Spread the love

LEAVE A REPLY

Please enter your comment!
Please enter your name here