ವಿರೋಧಿಗಳನ್ನು ಮೂಲೆಗುಂಪು ಮಾಡಿದ ಮತದಾರ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸುವ ಮೂಲಕ ವಿರೋಧಿಗಳ ಕೂಟವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಶಿರಹಟ್ಟಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಹಿರಿಯ ಮುಖಂಡ ಪೂರ್ಣಾಜಿ ಖರಾಟೆ ಹೇಳಿದರು.

Advertisement

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಶುಕ್ರವಾರ ಸಂಜೆ ಪಟ್ಟಣದ ಶಿಗ್ಲಿ ನಾಕಾ ಬಳಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಅವರು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರ ಹಿಡಿದ ಕರ್ನಾಟಕ ಹಾಗೂ ತೆಲಂಗಾಣ ಹೊರತುಪಡಿಸಿ ಅವರು ಸೋಲು ಕಂಡ ಕಡೆಗಳಲ್ಲೆಲ್ಲ ಮಾತ್ರ ಮತ ಚೋರಿ ಆಗುತ್ತಿದೆ ಎನ್ನುವ ಹುಚ್ಚುತನದ ಹೇಳಿಕೆಯನ್ನು ಜನ ನಂಬುವುದಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಹಾಗೂ ಅನೇಕ ಹಿರಿಯ ಮುಖಂಡರ ನೇತೃತ್ವದಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವ ಸ್ಪಷ್ಟ ನಿರ್ಧಾರ ಘೋಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸೇರಿದ್ದ ನೂರಾರು ಕಾರ್ಯಕರ್ತರು ಮೋದಿ, ಅಮಿತ್ ಶಾ, ಬಿಜೆಪಿ ಹೆಸರಿನಲ್ಲಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಆರ್.ವಿ. ವೆರ್ಣೆಕರ, ಅನಿಲ ಮುಳಗುಂದ, ಎಂ.ಆರ್. ಪಾಟೀಲ್, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ಶಕ್ತಿ ಕತ್ತಿ, ಡಿ.ವೈ. ಹುನಗುಂದ, ನವೀನ ಹಿರೇಮಠ, ಮಂಜುನಾಥ ಹೊಗೆಸೊಪ್ಪಿನ, ಬಾಬಣ್ಣ ವೇರ್ಣೆಕರ, ಭೀಮಣ್ಣ ಯಂಗಾಡಿ, ಅಶೋಕ ಶಿರಹಟ್ಟಿ, ವಾಸು ಬೋಮಲೆ, ಜಗದೀಶಗೌಡ ಪಾಟೀಲ, ವಿಜಯ ಕುಂಬಾರ, ಕಿರಣ ಲಮಾಣಿ, ವೀರಣ್ಣ ಅಕ್ಕೂರ, ರಾಮು ಪೂಜಾರ, ನಿಂಗಪ್ಪ ಮಡಿವಾಳರ, ಉಳವೇಶಗೌಡ ಪಾಟೀಲ, ಜ್ಞಾನಬೋ ಬೋಮಲೆ, ನಿಂಗಪ್ಪ ಪ್ಯಾಟಿ, ರುದ್ರಪ್ಪ ಉಮಚಗಿ, ಬಸವರಾಜ ಕಲ್ಲೂರ, ಮುತ್ತಣ್ಣ ಚೋಟಗಲ್ ಸೇರಿ ನೂರಾರು ಕಾರ್ಯಕರ್ತರು ಇದ್ದರು.

ಪರಿಸರ ಚಿಂತಕಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರ ಅಗಲಿಕೆ ಹಾಗೂ ದೆಹಲಿ ಬಾಂಬ್ ಸ್ಪೋಟದಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೋಟ್ ಚೋರಿ ಎಂದು ಹೇಳುತ್ತಾ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಯನ್ನು ಮತದಾರರು ತಿರಸ್ಕರಿಸಿ ವಿರೋಧಿಗಳನ್ನು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮಹಾಘಟಬಂಧನದಲ್ಲಿ ಸಿಲುಕಿ ಕಣ್ಣಿಗೆ ಕಾಣದಷ್ಟು ದೂರ ಹೋಗಿದೆ ಎಂದು ಮುಖಂಡರು ಟೀಕಿಸಿದರು.

 


Spread the love

LEAVE A REPLY

Please enter your comment!
Please enter your name here