ವಿಜಯಸಾಕ್ಷಿ ಸುದ್ದಿ, ಡಂಬಳ : ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲಗೆ ಬಾರಿಸುತ್ತಾ ಗುಂಪು ಗುಂಪಾಗಿ ಯುವಕರು, ಚಿಕ್ಕ ಮಕ್ಕಳು, ಹಿರಿಯರು, ಮಹಿಳೆಯರು ಹೋಳಿ ಹಬ್ಬದಂದು ಮುಖಕ್ಕೆ ಪರಸ್ಪರ ಬಣ್ಣ ಹಚ್ಚುವ ಮೂಲಕ ಸೌರ್ಹಾದಯುತವಾಗಿ ಹೋಳಿ ಹಬ್ಬ ಆಚರಣೆ ಮಾಡಿದರು.
ಬೆಳಗ್ಗೆಯಿಂದಲೇ ಗುಂಪು ಗುಂಪಾಗಿ ಯುವಕರು ಒಂದೆಡೆ ಸೇರಿ ಫೈಬರ್ ಹಲಗೆಯನ್ನು ಬಾರಿಸುತ್ತಾ ಬಣ್ಣವನ್ನು ಹಚ್ಚಿ ಸಂಭ್ರಮಿಸಿದರು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಬಣ್ಣದೋಕುಳಿ 10 ಗಂಟೆವರೆಗೂ ಸಾಧರಣವಾಗಿದ್ದು, 10 ಗಂಟೆಯ ನಂತರ ಮಧ್ಯಾಹ್ನ 1 ಗಂಟೆಯವರಿಗೂ ಬಣ್ಣದ ಸಂಭ್ರಮ ರಂಗೇರಿತ್ತು.
ಗ್ರಾಮೀಣ ಪ್ರದೇಶದಲ್ಲಿ ಹೋಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಹಲಗೆಗಳ ಸದ್ದು ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಿತು. ಹೋಳಿ ಹಬ್ಬದ ನಿಮಿತ್ತ ಶಾಂತಿ ಕದಡಬಾರದು ಎಂದು ಪೊಲೀಸ್ ಇಲಾಖೆಯ ಸಿಪಿಐ ಮಜುನಾಥ ಕುಸಗಲ್ಲ, ಪಿಎಸ್‌ಐ ಸುಮಾ ಗೋರಬಾಳ, ಎಎಸ್‌ಐ ವಿ.ವೈ. ತಂಟ್ರಿ ಅಗತ್ಯ ಮುಂಜಾಗೃತಾ ಕ್ರಮ ಕೈಗೊಂಡಿದ್ದರು.