ಬೆಂಗಳೂರು:- ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್ ಗ್ಯಾರಂಟಿ ಎಂದು ಪ್ರವೀಣ್ ಶೆಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜೂನ್ 5ರಂದು ಥಗ್ ಲೈಫ್’ ಸಿನಿಮಾ ಎಲ್ಲಿಯೂ ಕೂಡ ರಿಲೀಸ್ ಆಗಬಾರದು. ಒಂದು ವೇಳೆ ಸಿನಿಮಾ ರಿಲೀಸ್ ಆದರೆ ಕರ್ನಾಟಕದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಲಿದೆ. ಜೂ.5ರಂದು ಸಿನಿಮಾ ರಿಲೀಸ್ ಆದರೆ ಸಿನಿಮಾ ಥಿಯೇಟರ್ ಒಳಗಡೆ ನುಗ್ಗಿ ಥಿಯೇಟರ್ ಪುಡಿಪುಡಿ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ತೀರ್ಮಾನ ಮಾಡಿದ್ದೇವೆ. ನಾವೆಲ್ಲಾ ಸೇರಿ ಬೆಂಗಳೂರು ಬಂದ್ ಮಾಡುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ. ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಮಾತು ಸಹಿಸಲ್ಲ. ನಟ ಕ್ಷಮೆ ಕೇಳಬೇಕು. ನಾನು ಸದಾ ಕನ್ನಡ ಪರ. ಸಿನಿಮಾ ರಿಲೀಸ್ ಆದರೆ ಕನ್ನಡ ಸಂಘಟನೆಯ ಹಿರಿಯ ಹೋರಾಟಗಾರರ ಅಭಿಪ್ರಾಯ ಸಂಗ್ರಹಿಸಿ ಹೋರಾಟ ರೂಪಿಸುತ್ತೇವೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.