ಬೆಂಗಳೂರು: ಬಿಜೆಪಿಯ ಪುಡಾರಿಗಳು RSSಗೆ ಬಂದ ಮೇಲೆ ಭಾರೀ ಬದಲಾವಣೆ ಆಗಿದೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಪಥಸಂಚಲನ ಕುರಿತಂತೆ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
ಇವತ್ತಿನ ಆರ್‌ಎಸ್‌ಎಸ್ ಬದಲಾವಣೆ ಆಗಿದೆ. ಮೊದಲು ಚಡ್ಡಿ ಹಾಕುತ್ತಿದ್ದ ಆರ್‌ಎಸ್‌ಎಸ್ ಈಗ ಇಲ್ಲ. ಬಿಜೆಪಿಯ ಪುಡಾರಿಗಳು ಆರ್‌ಎಸ್‌ಎಸ್‌ಗೆ ಬಂದು ಆರ್‌ಎಸ್‌ಎಸ್ ಬದಲಾವಣೆ ಆಗಿದೆ.
ಚಡ್ಡಿ ಹಾಕುತ್ತಿದ್ದ ಆರ್‌ಎಸ್‌ಎಸ್ ಪ್ಯಾಂಟ್ ಬಂದ ಮೇಲೆ ಬದಲಾವಣೆ ಆಗಿದೆ ಎಂದು ಕಿಡಿಕಾರಿದರು. ಸಹಜವಾಗಿ ಸರ್ಕಾರಿ ಅಧಿಕಾರಗಳು ಹೀಗೆ ಭಾಗವಹಿಸಿ ಗೊಂದಲ ಸೃಷ್ಟಿ ಮಾಡಬಾರದು. ಇಂತಹದ್ರಲ್ಲಿ ಭಾಗಿಯಾಗದೇ ಸುಮ್ಮನೆ ಇರಬೇಕು. ಕೋರ್ಟ್ ಆದೇಶಕ್ಕೆ ನಾವು ತಲೆ ಬಾಗಬೇಕಾಗಿದೆ ಎಂದರು.



