ಬೆಂಗಳೂರು: ಅನ್ನ ನೀಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಏನು ಪ್ರಯೋಜನ ?ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉಸ್ತುವಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳ ಜತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.
ರೈತ ವಿರೋಧಿ ಕಾಂಗ್ರೆಸ್ ಸರ್ಕಾರ
ಬೆಳಗಾವಿಯಲ್ಲಿ ರೈತರು ಏಳು ದಿನದಿಂದ ಹೋರಾಟ ಮಾಡ್ತಿದ್ದಾರೆ, ಸಿಎಂ, ಉಸ್ತುವಾರಿ ಸಚಿವರು ಇದರ ಬಗ್ಗೆ ಚಕಾರ ಎತ್ತಿಲ್ಲಾ. ಅನ್ನ ಕೊಡುವ ರೈತನನ್ನೇ ಕಾಪಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದ್ದು ಪ್ರಯೋಜನ ಏನು.? ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದು ಕಬ್ಬು ಬೆಳೆಯುವ ರೈತರನ್ನು ಬಲಿಪಶು ಮಾಡಬೇಡಿ. ಕಬ್ಬು ಬೆಳೆಗಾರರು ವಿಚಾರದಲ್ಲಿ ರಾಜಕಾರಣ ಮಾಡದೇ, ರೈತರ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡಬೇಕು.ನಾವು ಕೂಡ ಶೀಘ್ರವಾಗಿ ಕಬ್ಬು ಬೆಳೆಗಾರನ್ನು ಭೇಟಿಯಾಗಿ, ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ನಿಖಿಲ್ ಅವರು ಭರವಸೆ ನೀಡಿದರು.
ಜೆಡಿಎಸ್-ಬಿಜೆಪಿ ಮೈತ್ರಿ ನೋಡಿ ಕಾಂಗ್ರೆಸ್ ಬೆಚ್ಚಿ ಬಿದ್ದಿದದೆ
ಬಿಜೆಪಿ ಜೊತೆ ಜೆಡಿಎಸ್ ವೀಲಿನ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಕ್ಕಿದ ಬೆಂಬಲ ನೋಡಿ ಕಾಂಗ್ರೆಸ್ ನವರು ಬೆಚ್ಚಿಬಿದ್ದಿದ್ದಾರೆ. ಆಗಾಗಿ ಈ ರೀತಿ ಮಾತಾಡ್ತಾರೆ ಎಂದು ಕಿಡಿ ಕಾರಿದರು.
ಯಾವ ಪುರುಷಾರ್ಥಕ್ಕೆ ಟನಲ್ ರೋಡ್
GBA ಚುನಾವಣೆಯಿಂದ ಬೆಂಗಳೂರು ನಗರದಲ್ಲಿ ಇಲ್ಲಿವರೆಗೆ 70% ಆದಾಯ ರೆವಿನ್ಯೂ ಕಲೆಕ್ಟ್ ಆಗ್ತಿದೆ. ಅದ್ರೆ ಬೆಂಗಳೂರು ನಗರಕ್ಕೆ ವಾಪಸ್ ಏನ್ ಕೊಟ್ಟಿದ್ದೀರಾ.? ರಸ್ತೆ ಗುಂಡಿಗಳಿಂದ ಹಲವಾರು ಸಾವು ನೋವಾಗಿದೆ. ಅದ್ರೆ ಎಷ್ಟು ಗುಂಡಿಗಳನ್ನ ಮುಚ್ಚಿದ್ದಿರಾ.? ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಕೊಟ್ಟಿದ್ದ ಗಡುವು ಮುಗಿದಿದೆ. ಬಿಬಿಎಂಪಿನೇ ಬೆಂಗಳೂರಿನಲ್ಲಿ ಹದಿನೈದು ಸಾವಿರ ರಸ್ತೆ ಗುಂಡಿ ಇದೆ ಅಂತ. ಈಗ ಟನಲ್ ಅಂತ ಕುತ್ತಿದ್ದೀರಾ? ಟನಲ್ ರೋಡ್ ಗೆ ಎಷ್ಟು ಬಜೆಟ್ ಬೇಕು, ಅಲ್ಲಿ ಓಡಾಡೋರು ಯಾರು.? ಬರೀ ಕಾರಿನಲ್ಲಿ ಹೋಗೊಕೆ ಬರೋಕೆ 300 ಕೊಡಬೇಕು. ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಮೊದಲು ಫ್ಲೈಓವರ್ ಮುಗಿಸಿ, ಆಮೇಲೆ ಟನಲ್ ರೋಡ್ ಗೆ ಬನ್ನಿ
ಮೆಟ್ರೊದ ದರವನ್ನ ಹೆಚ್ಚಿಗೆ ಮಾಡಿದ್ದಿರಾ.? ಪ್ರತಿದಿನ ವಿದ್ಯಾರ್ಥಿಗಳು, ದಿನಗೂಲಿ ಕೆಲಸ ಮಾಡುವವರು ಸಂಚಾರ ಮಾಡ್ತಾರೆ. ಎಲ್ಲಾತರದ ವರ್ಗದ ಜನರು ಸಂಚಾರ ಮಾಡ್ತಾರೆ.ಮೊದಲು ಆದ್ರ ದರ ಕಡಿಮೆ ಮಾಡಿ. ಸಾರ್ವಜನಿಕರಿಗೆ ಅನುಕೂಲ ಮಾಡಿ. ಯಾವ ಪುರುಷಾರ್ಥಕ್ಕೆ ಟನಲ್ ರೋಡ್ ಮಾಡ್ತಿದ್ದೀರಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಟನಲ್ ರಸ್ತೆ ಯಾರಿಗಾಗಿ ಮಾಡಲಾಗುತ್ತಿದೆ, ಟನಲ್ ನಿರ್ಮಾಣ ಅವೈಜ್ಞಾನಿಕ ಯೋಜನೆ, ಮೊದಲು ಸಾರ್ವಜನಿಕರಿಗೆ ಉತ್ತಮ ರಸ್ತೆಗಳನ್ನು ಕಲ್ಪಿಸಿ. ಈ ಟನಲ್ ರೋಡ್ ನನ್ನು ನಮ್ಮ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತೇನೆ. ಮೊದಲು ರಸ್ತೆ ಗುಂಡಿ ಮುಚ್ಚಿ ಎಂದು ಸರ್ಕಾರ ವಿರುದ್ಧ ನಿಖಿಲ್ ಅವರು ತೀವ್ರ ವಾಗ್ದಾಳಿ ನಡೆಸಿದರು.
ನಂತರ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಅವರು ಭೂ ಸ್ವಾಧೀನವಾಗಿದ್ದ ಜಮೀನಿಗೆ ಸೂಕ್ತ ಪರಿಹಾರ ಸಿಗದಕ್ಕೆ ಮನನೊಂದು ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು, ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮತ್ತು ಕೆ.ಆರ್. ಪೇಟೆ ಶಾಸಕರಾದ ಹೆಚ್.ಟಿ. ಮಂಜು ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತ ರೈತನ ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.


