HomeKarnataka Newsರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

ರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ: ನಿಖಿಲ್ ಕುಮಾರಸ್ವಾಮಿ

For Dai;y Updates Join Our whatsapp Group

ಬೆಂಗಳೂರು: ರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರದಿಂದ ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದರು.

ಈಗಾಗಲೇ 180 ಕೋಟಿ ರೂ. ಖರ್ಚು ಮಾಡಿದ್ದೀರಾ. ಮತ್ತೆ ಜಾತಿಗಣತಿ ಮಾಡಿದರೆ ಮತ್ತೆ ಜನರ ತೆರಿಗೆ ಹಣ ಖರ್ಚು ಆಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ನೀವು ಸರಿಯಾಗಿ ಜಾತಿಗಣತಿ ಮಾಡುವುದಿಲ್ಲ. ನಿಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಘೋಷಣೆ ಮಾಡಿದ್ದೀರಾ. ಕೆಲವು ಸಮುದಾಯಗಳನ್ನ ಮೇಲೆ ಎತ್ತೋದು, ಕೆಲವು ಜಾತಿಗಳನ್ನು ಕೆಳಗೆ ತುಳಿಯೋ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಜಾತಿಗಣತಿ ಮಾಡೋದು ಬೇಡ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತೇವೆ ಎಂದಿದ್ದಾರೆ. ಆದರೆ ಇಲ್ಲಿ ರಾಜಕೀಯ ಅಜೆಂಡಾ ಮುಂದೆ ಇಟ್ಟುಕೊಂಡು ಇದನ್ನ ಮಾಡುತ್ತಿದ್ದಾರೆ. ನಿಮ್ಮ ನಿಮ್ಮ ರಾಜಕೀಯ ಭವಿಷ್ಯ ಕಟ್ಟೋಕೆ ಜಾತಿಗಣತಿ ಮಾಡ್ತಿದ್ದೀರಾ. ಕೆಲವು ಜಾತಿ ಜಾಸ್ತಿ ತೋರಿಸೋದು, ಕೆಲವು ಕಡಿಮೆ ತೋರಿಸುವ ಕೆಲಸ ಮಾಡುತ್ತೀರಾ. ರಾಜ್ಯದ ಜಾತಿಗಣತಿ ಉದ್ದೇಶ, ದುರುದ್ದೇಶ ಬೇರೆಯೇ ಇದೆ ಎಂದು ಆರೋಪಿಸಿದರು.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img