ಬೆಂಗಳೂರು: ಜೈಲಲ್ಲಿ ಯಾರಿಗೂ ಸೌಲಭ್ಯ ಕೊಡಬೇಕು ಅಂತ ನಿಯಮ ಇಲ್ಲ. ಇದು ಸರ್ಕಾರಕ್ಕೆ ಮುಜುಗರ ತರುತ್ತಿದೆ. ಸುಮ್ಮನೆ ಊಹಾಪೋಹ ಬೇಡ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಪ್ರಕರಣದ ಬಗ್ಗೆ ನಾನು ಮಾಧ್ಯಮದಲ್ಲಿ ಅಷ್ಟೇ ನೋಡಿರೋದು. ಸೌಲಭ್ಯ ಕೊಡಬೇಕು ಎಂದು ಸರ್ಕಾರಕ್ಕೆ ಉದ್ದೇಶ ಇರಲ್ಲ. ಅವರವರೇ ಏನೇನೋ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ.
Advertisement
ಅಂತವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಿದೆ ಎಂದರು. ಐಷಾರಾಮಿ ರಾಜಾತಿಥ್ಯ ಅನುಭವಿಸಿದವರು ಹಾಗೂ ನೀಡಿದವರು ತಕ್ಕ ಶಿಕ್ಷೆಗೆ ಗುರಿಯಾಗುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಅದ್ದರಿಂದ ಚುರುಕಾಗಿ ತನಿಖೆ ನಡೆದಿದೆ. ಬಿಜೆಪಿ ಶಾಸಕರು ಯಾವ ಮಟ್ಟಕ್ಕೆ ಒತ್ತಡ ನೀಡಿದ್ರು ಎನ್ನುವ ಕುರಿತು ಎಲ್ಲರಿಗೂ ತಿಳಿದೇ ಇದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ.