ಬೆಂಗಳೂರು:- ನಗರದಲ್ಲಿ ನಾಳೆ ದಿನವಿಡೀ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಸ್ಕಾಂ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ. ದಿನವಿಡೀ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಬೆಸ್ಕಾಂ, ” ಮತ್ತಿಕೆರೆ ಸ್ಟೇಷನ್ ವ್ಯಾಪ್ತಿಯಲ್ಲಿ ಆಗಸ್ಟ್ 29 ರಂದು ಬೆಳಿಗ್ಗೆ 10 ಗಂಟೆಗಳಿಂದ ಸಂಜೆ 5 ಗಂಟೆಗಳವರೆಗೆ ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೂ ಎಲ್ ಜಿ ಹಳ್ಳಿ, ಆರ್ ಎಮ್ ವಿ 2ನೇ ಹಂತ, ಸಂಜೀವಪ್ಪ ಕಾಲೋನಿ, ನ್ಯೂ ಬಿ ಇ ಎಲ್ ರಸ್ತೆ, ಎಂ ಎಸ್ ಆರ್ ನಗರ, ಮೋಹನ್ ಕುಮಾರ ನಗರ, ಪಂಪಾ ನಗರ, ಬಿ ಕೆ ನಗರ, ಬಾಂಬೆ ಡೈಯಿಂಗ್ ರಸ್ತೆ, ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಎಚ್ ಎಂ ಟಿ ಮುಖ್ಯ ರಸ್ತೆ, ಎಚ್ ಎಂ ಟಿ ಲೇ ಔಟ್, ಬೃಂದಾವನ ನಗರ, ಎಸ್ ಬಿ ಎಮ್ ಕಾಲೋನಿ, ಎಂ ಆರ್ ಜೆ ಕಾಲೋನಿ, ವಿ ಆರ್ ಎಲ್ ಲೇಔಟ್, ಜೆ ಪಿ ಪಾರ್ಕ್ ಸೇರಿ ಹಲವೆಡೆ ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.