ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ತಾಲೂಕಿನ ಕೋಡಿಹಳ್ಳಿ ಕ್ರಾಸ್ ಸಮೀಪದ ನಂದಿ ರೆಸಾರ್ಟ್ನ ಕಾಫಿ ಸ್ಟಾಲ್‌ನಲ್ಲಿ ಚಾಕಲೇಟ್ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಅಂಗಡಿಯೊಳಗೆ ಕುಳಿತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಗಮನಿಸಿದ ಚೈತ್ರ (31) ಕೇಶವನಾಯ್ಕ (38) ಚಾಕಲೇಟ್ ಕೇಳುವ ನೆಪದಲ್ಲಿ ಕಿತ್ತುಕೊಂಡು ಬೈಕ್ ಹತ್ತಿ ಪರಾರಿಯಾಗಲು ಯತ್ನಿಸಿದಾಗ, ಸಂತ್ರಸ್ತ ಮಹಿಳೆ ತಡೆಯಲು ಮುಂದಾಗಿದ್ದರು. ಆಗ ಆರೋಪಿಗಳು ನಕಲಿ ಗನ್ ತೋರಿಸಿ ಪರಾರಿಯಾಗಿದ್ದರು.
ಕೂಡಲೇ ಹರಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ರೆಸಾರ್ಟ್ ಮಾಲಿಕರು ಘಟನೆಯನ್ನು ವಿವರಿಸಿದಾಗ, ಸಿಪಿಐ ನಾಗರಾಜ್ ಕಮ್ಮಾರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ, ಹಡಗಲಿ ತಾಲೂಕು ಅಡವಿಮಲ್ಲನಕೇರಿ ಹತ್ತಿರ ಆರೋಪಿಗಳನ್ನು ಘಟನೆ ನಡೆದ 3 ಗಂಟೆಯ ಒಳಗಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಹೂವಿನ ಹಡಗಲಿ ತಾಲೂಕಿನ ಅಡವಿಮಲ್ಲನಕೇರಿ ತಾಂಡದವರಾಗಿದ್ದು, ಅವರಿಂದ ಮಾಂಗಲ್ಯ ಸರ, ಎರಡು ನಕಲಿ ಗನ್, ಒಂದು ಪಲ್ಸರ್ ಬೈಕ್, ಮೂರು ಮೊಬೈಲ್ ಫೋನ್, ಎರಡು ಜರ್ಕಿನ್ ವಶಪಡಿಸಿಕೊಂಡಿದ್ದಾರೆ. ಕಾರ್ಯಚರಣೆಲ್ಲಿ ಯಶಸ್ವಿಯಾದ ಸಿಪಿಐ ನಾಗರಾಜ್ ಕಮ್ಮಾರ ತಂಡವನ್ನು ವಿಜಯನಗರ ಜಿಲ್ಲಾ ಎಸ್ಪಿ ಹರೀಶ್ ಬಾಬು ಶ್ಲಾಘಿಸಿದ್ದಾರೆ.
ಡಿವೈಎಸ್ಪಿ ವೆಂಕಟಪ್ಪ ನಾಯಕ, ಎಸ್‌ಐ ವಸಂತಪ್ಪ, ಪಿಎಸ್‌ಐ ಶಂಭುಲಿAಗಯ್ಯ ಎಸ್.ಹಿರೇಮಠ ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.