• About
  • Advertise
  • Privacy & Policy
  • Contact
Friday, October 30, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ಧರ್ಮವಿಲ್ಲದೆ ಬದುಕಿಗೆ ಅರ್ಥವಿಲ್ಲ : ರಂಭಾಪುರಿ ಶ್ರೀಗಳು

News Desk by News Desk
July 28, 2024
in Bengaluru News
Conclusion of the evangelistic meeting
0
SHARES
0
VIEWS
Share on Facebook
ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಮನುಷ್ಯನಿಗೆ ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ. ಶಿವಾಗಮಗಳ ಸಾಹಿತ್ಯ ಮತ್ತು ವಚನ ಸಾಹಿತ್ಯ ವೀರಶೈವ ಧರ್ಮದ ಅಮೂಲ್ಯ ಸಂಪತ್ತು ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಧರ್ಮೋತ್ತೇಜಕ ಸಂಗಮ ಸಮಾವೇಶದ ಸಮಾರೋಪ  ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡರ ಸಮನ್ವಯದಿಂದ ಜನಕಲ್ಯಾಣ ಸಾಧ್ಯವಾಗುತ್ತದೆ. ಧರ್ಮದ ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಧರ್ಮ ದರ್ಶನಗಳ ಅರಿವು ಮತ್ತು ಆಚರಣೆ ಮುಖ್ಯ. ಅಧಿಕಾರದ ಅಂತಸ್ತು ಮೇಲೇರಿದಂತೆ ನೀತಿಯ ಅಂತಸ್ತು ಮೇಲೇರಬೇಕು. ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಶಿವಾಗಮಗಳ ಪ್ರಾಚೀನ ಸಾಹಿತ್ಯ ಹಾಗೂ ಶರಣರ ವಚನ ಸಾಹಿತ್ಯ ಎರಡು ಕಣ್ಣು ಇದ್ದಂತೆ. ಈ ಧರ್ಮದ ದಾರ್ಶನಿಕತೆ ಸರ್ವ ಜನಾಂಗಕ್ಕೂ ದಾರಿದೀಪ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಜೀವಾತ್ಮ ಪರಮಾತ್ಮನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನಾಗುವ ಆದರ್ಶತೆಗಳನ್ನು ಕಾಣಬಹುದೆಂದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ರಾಜಾಪುರ ಸಂಸ್ಥಾನಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರೆ, ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿ ಹಂಚಿಕೊಂಡರು. ಸಂಗೊಳ್ಳಿ, ದೊಡ್ಡಗುಣಿ, ಶ್ರೀಗಳು ಉಪಸ್ಥಿತರಿದ್ದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಸವ ರಾಜೇಂದ್ರ, ಜಿ.ಮರಿಸ್ವಾಮಿ ಪಾಲ್ಗೊಂಡಿದ್ದರು.
  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾದ ಡಾ.ಸಿ. ಶಿವಕುಮಾರಸ್ವಾಮಿ ಅವರು ವೀರಶೈವ ಧರ್ಮದ ಮೌಲ್ಯಗಳ ಕುರಿತು ಉಪನ್ಯಾಸವನ್ನಿತ್ತರು. ಬೀರೂರು ಶಿವಸ್ವಾಮಿ, ಆರ್.ಆರ್. ಹಿರೇಮಠ ಇನ್ನಿತರರು ಇದ್ದರು.
ಶಿವಶಂಕರ ಶಾಸ್ತ್ರೀ ತಂಡದವರಿಂದ ಭಕ್ತಿಗೀತೆ ಜರುಗಿತು. ಕೈಗಾರಿಕೋದ್ಯಮಿ ಟಿ.ಎಸ್. ಉಮಾಶಂಕರ ಸ್ವಾಗತಿಸಿದರು. ಕನ್ನಡ ಹೋರಾಟಗಾರ ಫಾಲನೇತ್ರ ನಿರೂಪಿಸಿದರು. ಬಿಜ್ಜಳ್ಳಿ ನಂದೀಶ, ನಿರಂಜನ ಕೋವಾ ರೇವಣ್ಣ, ಎಂ.ಮಾದಯ್ಯ ಮತ್ತು ಸೋಮಶೇಖರ ಪಾಟೀಲ ದಾಸೋಹ ಸೇವೆ ನೆರವೇರಿಸಿದರು.
ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಧಾರ್ಮಿಕ ಮೌಲ್ಯಗಳು ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿವೆ. ವೀರಶೈವ ಧರ್ಮದಲ್ಲಿ ಗಂಡು-ಹೆಣ್ಣು ಉಚ್ಛ-ನೀಚ ಮತ್ತು ಬಡವ-ಬಲ್ಲಿದ ಎನ್ನದೇ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದೆ. ವೀರಶೈವ ಧರ್ಮದ ಪೀಠ ಮತ್ತು ಮಠಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಾ ಬಂದಿವೆ. ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ-ಶಾಂತಿ ಸಮೃದ್ಧಿ ಎಲ್ಲರಿಗಾಗಲಿ ಅನ್ನುವ ಸಾರ್ವತ್ರಿಕ ಸತ್ಯವನ್ನು ಅರಿತು ಬಾಳಿದರೆ ಜೀವನದಲ್ಲಿ ಉತ್ಕರ್ಷತೆ ಕಾಣಬಹುದೆಂದರು.
Tags: BangaloreConclusion of the evangelistic meetingGadaggadag newsLatestNewsSri Rambhapuri Jagadguruupdatenews
ShareSendShare
Previous Post

ನಂದಿ ರೆಸಾರ್ಟ್ನ ಕಾಫಿ ಸ್ಟಾಲ್‌ನಲ್ಲಿ ಸರಗಳ್ಳರ ಬಂಧನ

Next Post

ಆರೋಗ್ಯ ಜಾಗೃತಿಯತ್ತ ಗಮನ ಹರಿಸಿ : ಆರ್.ಎಸ್. ಬುರಡಿ

News Desk

News Desk

Next Post
Meeting of parents of specially-abled children of Gadag city zone

ಆರೋಗ್ಯ ಜಾಗೃತಿಯತ್ತ ಗಮನ ಹರಿಸಿ : ಆರ್.ಎಸ್. ಬುರಡಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
KPSC Veterinary Scam: 329 ಅಭ್ಯರ್ಥಿಗಳಿಗೆ CID ನೋಟಿಸ್; ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ!

KPSC ನೇಮಕಾತಿ ಅಕ್ರಮ ಪ್ರಕರಣ: ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ, ಸೋಮವಾರ ಮುಖ್ಯಸ್ಥರ ನೇಮಕ

October 30, 2026
ಚಾರ್ ಧಾಮ್ ಯಾತ್ರೆ ವೇಳೆ ಘೋರ ದುರಂತ: ಹೆಲಿಕಾಪ್ಟರ್ ಪತನದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಾವು!

ಚಾರ್ ಧಾಮ್ ಯಾತ್ರೆ ವೇಳೆ ಘೋರ ದುರಂತ: ಹೆಲಿಕಾಪ್ಟರ್ ಪತನದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಾವು!

October 30, 2026
ಹಾಂಗ್ ಕಾಂಗ್ ಸಿಕ್ಸಸ್ʼನಲ್ಲಿ ಪಾಕ್ ಅಬ್ಬರ: ಕೇವಲ 23 ಎಸೆತಗಳಲ್ಲಿ ಭಾರತದ ವಿರುದ್ಧ ಭರ್ಜರಿ ಜಯ!

ಹಾಂಗ್ ಕಾಂಗ್ ಸಿಕ್ಸಸ್ʼನಲ್ಲಿ ಪಾಕ್ ಅಬ್ಬರ: ಕೇವಲ 23 ಎಸೆತಗಳಲ್ಲಿ ಭಾರತದ ವಿರುದ್ಧ ಭರ್ಜರಿ ಜಯ!

October 30, 2026
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಪೈಲಟ್ ಸೇರಿ 6 ಮಂದಿ ಸಜೀವ ದಹನ

ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಪೈಲಟ್ ಸೇರಿ 6 ಮಂದಿ ಸಜೀವ ದಹನ

October 30, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

KPSC Veterinary Scam: 329 ಅಭ್ಯರ್ಥಿಗಳಿಗೆ CID ನೋಟಿಸ್; ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ!

KPSC ನೇಮಕಾತಿ ಅಕ್ರಮ ಪ್ರಕರಣ: ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ, ಸೋಮವಾರ ಮುಖ್ಯಸ್ಥರ ನೇಮಕ

October 30, 2026
ಚಾರ್ ಧಾಮ್ ಯಾತ್ರೆ ವೇಳೆ ಘೋರ ದುರಂತ: ಹೆಲಿಕಾಪ್ಟರ್ ಪತನದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಾವು!

ಚಾರ್ ಧಾಮ್ ಯಾತ್ರೆ ವೇಳೆ ಘೋರ ದುರಂತ: ಹೆಲಿಕಾಪ್ಟರ್ ಪತನದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಾವು!

October 30, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper