ದೇಹದ ತೇವಾಂಶ ಕಾಯ್ದುಕೊಳ್ಳಲು ಸಲಹೆ

0
hydration
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೋರ‍್ಯಾಕ್ಟ್ ಸಂಸ್ಥೆ, ಜೆ.ಟಿ. ಕಾಲೇಜ್ ಬಿಸಿಎ & ಬಿಬಿಎ ಗದಗ ಹಾಗೂ ರೋಟರಿ ಸಂಸ್ಥೆ ಗದಗ ಬೆಟಗೇರಿಯ ಸದಸ್ಯರು ಕ್ರೀಡಾಪಟುಗಳು ಹಾಗೂ ನಾಗರಿಕರು ಏರುತ್ತಿರುವ ಬಿಸಿಲು ಹಾಗೂ ಸೆಖೆಯಿಂದ ತಮ್ಮ ದೇಹವನ್ನು ಹೇಗೆ ರಕ್ಷಿಸಿಕೊಂಡು, ದೇಹದ ತೇವಾಂಶ (ಹೈಡ್ರೇಟ್) ಕಾಪಾಡಿಕೊಳ್ಳಬೇಕೆಂದು ತಿಳುವಳಿಕೆ ನೀಡುವ ಕರಪತ್ರವನ್ನು ಮುದ್ರಿಸಿ ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ವಿತರಿಸಿದರು.

Advertisement

ಕರಪತ್ರದಲ್ಲಿ ಶುದ್ಧ ನೀರನ್ನು ಕುಡಿಯುವದರಿಂದ ಆಗುವ ಲಾಭಗಳ ಕುರಿತು ಮಾಹಿತಿ ನೀಡಿದೆ. ನಾಗರಿಕರು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊರಗೆ ಬರುವುದನ್ನು ತಪ್ಪಿಸಲು ಸಲಹೆ ನೀಡಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಮೌಳಿ ಜಾಲಿ, ಕಾರ್ಯದರ್ಶಿ ವೀಣಾ ತಿರ್ಲಾಪೂರ, ಸದಸ್ಯರಾದ ಕಮಲಾಕ್ಷಿ ಅಂಗಡಿ, ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಶ್ರೀಧರ ಸುಲ್ತಾನಪೂರ, ರೋರ‍್ಯಾಕ್ಟ್ ಸಂಸ್ಥೆ ಜೆ.ಟಿ. ಕಾಲೇಜ್ ಬಿಸಿಎ & ಬಿಬಿಎ ಗದಗ ಅಧ್ಯಕ್ಷ ವಿಶ್ವಾಸ ಕೊಪ್ಪಳ, ಕಾರ್ಯದರ್ಶಿ ವೀರೇಂದ್ರ ಚನ್ನಪ್ಪನ್ನವರ, ಪ್ರಜ್ವಲ, ರಾಜು, ಪ್ರೀತಮ್, ಶಮಂತ, ಸಂಗಮೇಶ, ಪ್ರಿಯಾಂಕಾ, ಶ್ರೀನಾಥ, ಶಿವಕುಮಾರ, ಪಲ್ಲವಿ, ಶ್ರದ್ಧಾ, ಪ್ರಜ್ವಲ್ ಜೆ, ಕಲ್ಲಯ್ಯ, ರಾಘವೇಂದ್ರ, ಚಂದನಾ, ಪುಷ್ಪಾ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here