ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ

0
To provide justice to the ST community the BJP ST Morcha laid siege to the District Collector's office
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಾಲ್ಮೀಕಿ ನಿಗಮದಲ್ಲಿ ಸರಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್, ಪರಿಶಿಷ್ಟ ಪಂಗಡದ ಅನುದಾನದ 187 ಕೋಟಿ ರೂ. ಸಂಶಯಾತ್ಮಕ ಖಾತೆಗಳಿಗೆ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಎಸ್.ಟಿ ಮೋರ್ಚಾ ವತಿಯಿಂದ ಶುಕ್ರವಾರದಂದು ಗದಗ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಯಿತು.

Advertisement

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪರಿಶಿಷ್ಟ ಪಂಗಡದ ಅನುದಾನ 187 ಕೋಟಿ ರೂ ಸಂಶಯಾತ್ಮಕ ಖಾತೆಗೆ ವರ್ಗಾವಣೆ ಮಾಡಿ ವಾಲ್ಮೀಕಿ ನಿಗಮದಲ್ಲಿ ಸರ್ಕಾರಿ ಹಣವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚಕ್ಕೆ ಬಳಕೆ ಮಾಡಿಕೊಂಡಿರುವ ಆರೋಪವಿದೆ. ಕಾಂಗ್ರೆಸ್ ಸರ್ಕಾರದ ಅವ್ಯವಹಾರದಿಂದ ಮನನೊಂದ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕಣದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೊಟಪ್ಪ(ರಾಜು) ಕುರುಡಗಿ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಎಸ್.ಸಿ, ಎಸ್.ಸಿ/ಟಿ.ಎಸ್.ಪಿ ಯೋಜನೆಗಳಿಗೆ 28234 ಕೋಟಿ ರೂ ಮೀಸಲಿಟ್ಟಿತ್ತು. ಕಾಂಗ್ರೆಸ್ ಸರ್ಕಾರ ಬಂದ ಒಂದೇ ವರ್ಷದಲ್ಲಿ ಎಸ್.ಟಿ ನಿಗಮಗಗಳಲ್ಲಿ ಅವ್ಯವಹಾರ ಮಾಡುತ್ತಾ ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪರಿಹಾರವಲ್ಲ. ರಾಜ್ಯದ ಜನತೆಗೆ ಗ್ಯಾರಂಟಿ ಎಂಬ ನೆಪವೊಡ್ಡಿ ಎಸ್.ಸಿ/ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಳ್ಳವುದಲ್ಲದೇ ವಾಲ್ಮೀಕಿ ನಿಗಮದ ಹಣವನ್ನು ಕೂಡಾ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಸಾವಿಗೆ ಕಾರಣವಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ರಾಜ್ಯದ ಜನತೆೆ ಬುದ್ಧಿ ಕಲಿಸಿದ್ದಾರೆ ಎಂದರು.

ಎಸ್.ಟಿ. ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಈಶ್ವರಪ್ಪ ರಂಗಪ್ಪನವರ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ ಈ ಸರ್ವಾಧಿಕಾರಿ ಧೊರಣೆಗೆ ತಕ್ಕ ಪಾಠವನ್ನು ಸಮುದಾಯ ಕಲಿಸುತ್ತದೆ. ಈ ಅವ್ಯವಹಾರಕ್ಕೆ ಸಂಬಂಧಿಸಿ, ನೈತಿಕ ಹೊಣೆ ಹೊತ್ತು ಸರ್ಕಾರವನ್ನು ವಿಸರ್ಜಿಸಬೇಕು ಎಂದರು.

ಪ್ರತಿಭಟನೆಯ ಸಂದರ್ಭದಲ್ಲಿ ಮುಖಂಡರಾದ ಉಮೇಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪಕ್ಕಿರೇಶ ರಟ್ಟಿಹಳ್ಳಿ, ಆರ್.ಕೆ. ಚವ್ಹಾನ, ಪ್ರಮುಖರಾದ ಎಂ.ಎಸ್. ಕರೀಗೌಡ್ರ, ಜಗನ್ನಾಥಸಾ ಭಾಂಡಗೆ, ಈಶಪ್ಪ ನಾಯ್ಕರ, ಎಚ್.ಕೆ. ಹಟ್ಟಿಮನಿ, ಉಷಾ ಮಹೇಶ ದಾಸರ, ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ, ಮುತ್ತಣ್ಣ ಕಡಗದ, ರವಿ ಕರಿಗಾರ, ನಿಂಗಪ್ಪ ಮಣ್ಣೂರ, ಮುತ್ತಣ್ಣ ಜಂಗಣ್ಣವರ, ವಾಯ್.ಪಿ. ಅಡ್ನೂರ, ಯಲ್ಲಪ್ಪ ಶೇರಿ, ಬೂದಪ್ಪ ಹಳ್ಳಿ, ಭದ್ರೇಶ ಕುಸ್ಲಾಪೂರ, ಮುತ್ತಪ್ಪ ಮೂಲಿಮನಿ, ನಾಗರಾಜ ತಳವಾರ, ಸಿದ್ದು ಪಲ್ಲೇದ, ಗಂಗಾಧರ ಹಬೀಬ, ದೆವಪ್ಪ ಗೊಟೂರ, ರಾಘವೇಂದ್ರ ಯಳವತ್ತಿ, ಮಾಧುಸಾ ಮೇರವಾಡೆ, ಲಕ್ಷ್ಮಿ ಶಂಕರ ಕಾಕಿ, ಮುತ್ತು ಮುಶಿಗೇರಿ, ಅಶೋಕ ಸಂಕಣ್ಣವರ, ಸುರೇಶ ಚಿತ್ತರಗಿ, ಅಶೋಕ ಕರೂರ, ವೆಂಕಟೇಶ ಕೊಣಿ, ಮಂಜುನಾಥ ತಳವಾರ, ವಸಂತ ಮೇಟಿ, ಅಶೋಕ ನವಲಗುಂದ, ಮಾಂತೇಶ ನಲವಡಿ, ಶಿವು ಹಿರೇಮನಿಪಾಟೀಲ, ಇರ್ಷಾದ ಮಾನ್ವಿ, ನಾಗರಾಜ ಕುಲಕರ್ಣಿ, ಗೊವಿಂದರಾಜ ಪೂಜಾರ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ಬಸವರಾಜ ಹರ್ಲಾಪೂರ, ಬಸವರಾಜ ಬಡಿಗೇರ, ಮಹೇಶ ಶಿರಹಟ್ಟಿ, ಮಾರುತಿ ನಾಗರಳ್ಳಿ, ಪ್ರವೀಣ ಶಂಕಿನದಾಸರ, ಮಂಜುನಾಥ ಮುಳಗುಂದ, ಮೇಗರಾಜ ನಾಯಕ, ಮಾಂತೆಶ ಬಾತಾಖಾನಿ, ಅಯ್ಯಪ್ಪ ಅಂಗಡಿ, ಶರಣಪ್ಪ ಚಿಂಚಲಿ, ರತ್ನಾ ಕುರಗೊಡ, ರೇಖಾ ಬಂಗಾರಶೆಟ್ಟರ, ಅಪ್ಪಣ್ಣ ಟೆಂಗಿನಕಾಯಿ, ಕೆ.ಪಿ.ಕೋಟಿಗೌಡ್ರ, ಪರಶು ಪರಾಪೂರ, ಛಗನ ರಾಜಪುರೊಹಿತ, ಲಕ್ಷ್ಮಣ ಬೂದಿಹಾಳ, ಮಂಜುನಾಥ ಯಲಿಶಿರುರ, ಬಸವಂತಪ್ಪ ತಳವಾರ, ಯಲ್ಲಪ್ಪ ತಳವಾರ, ಲಕ್ಷ್ಮಣ ರಣತೂರ, ರಂಗಪ್ಪ ಯರಗೂಡಿ, ಪಾರಿಶನಾಥ ಮೆಲಾಣಿ, ವೀರಸಂಗಯ್ಯ ಮೊಕಾಶಿ, ಜಯಶ್ರೀ ಪಾಟೀಲ, ಜಯಶ್ರೀ ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here