ಇಂದು ಮೈಲಾರಲಿಂಗೇಶ್ವರ ಕಾರ್ತಿಕೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ನಿಸರ್ಗ ಬಡಾವಣೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವರ ಕಾತಿರ್ಕೋಕೋತ್ಸವವು ಡಿ. 12ರ ಸಾಯಂಕಾಲ 6.30ಕ್ಕೆ ದೇವಸ್ಥಾನದ ಆವರಣದಲ್ಲಿ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಷ.ಬ್ರ. ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ ಅಡ್ನೂರ ರಾಜೂರ ಗದಗ ವಹಿಸುವರು.

Advertisement

ಅಧ್ಯಕ್ಷತೆಯನ್ನು ಶ್ರೀ ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಎಸ್.ಎ. ಸಂಗಟಿ ವಹಿಸುವರು. ಉದ್ಘಾಟನೆಯನ್ನು ಗೋವಿಂದರಾವ್ ಗುರುಪಾದರಾವ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕೇಶವರಾಮ ಕೊಳ್ಳಿ, ಪ್ರಕಾಶ ನಿಂ.ಕರಿ, ಶ್ವೇತಾ ಪಿ.ಬೆನಕನವಾರಿ, ಮಲ್ಲಿಕಾರ್ಜುನ ತಡಹಾಳ ಆಗಮಿಸುವರು.

ಕಾರ್ಯಕ್ರಮದಲ್ಲಿ ಮೈಲಾರಪ್ಪ ನಿಂ.ಜಾಲಮ್ಮನವರ, ಹೂವನಗೌಡ ಬ.ಪಾಟೀಲ, ಶಿವಯೋಗೆಪ್ಪ ಶಿದ್ರಾಮಪ್ಪ ಗಡಾದ, ರಮೇಶ ಬ.ಚಿಕ್ಕಣ್ಣವರ, ಡಾ. ನಾಗರಾಜ ಈಶ್ವರಪ್ಪ ವಡಗೇರಿ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here